ಮತ್ತೆ ವಿವಾದಕ್ಕೀಡಾದ ರಶ್ಮಿಕಾ ! ತಿರುಗಿಬಿದ್ದ ರಜನಿ ಫ್ಯಾನ್ಸ್

Promotion

ಬೆಂಗಳೂರು, ಡಿಸೆಂಬರ್ 14, 2019 (www.justkannada.in): ನಟಿ ರಶ್ಮಿಕಾ ಮಂದಣ್ಣ ಇದೀಗ ಮಹೇಶ್ ಬಾಬು ಬಗ್ಗೆ ಹೊಗಳಲು ಹೋಗಿ ವಿವಾದಕ್ಕೀಡಾಗಿದ್ದಾರೆ.

‘ಸರಿಲೇರು ನೀಕೆವ್ವರು’ ತೆಲುಗು ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಸೂಪರ್ ಸ್ಟಾರ್ ಪದ ಬಳಕೆ ವೇಳೆ ವಿವಾದಕ್ಕೀಡಾಗಿದ್ದಾರೆ.

ಮಹೇಶ್ ಬಾಬು ಅವರಿಂದ ತುಂಬಾನೇ ಕಲಿತೆ. ಅವರು ನಿಜವಾದ ಸೂಪರ್ ಸ್ಟಾರ್ ಎಂದಿದ್ದರು. ಇದಕ್ಕೀಗ ರಜನೀಕಾಂತ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಜನಿಯನ್ನು ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೇ ಸೂಪರ್ ಸ್ಟಾರ್ ಎನ್ನಲಾಗುತ್ತಿದೆ. ರಶ್ಮಿಕಾ ರಜನಿ ಕ್ಷಮೆ ಕೇಳಬೇಕು ಎಂದು ರಜನಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.