ಶಿವಮೊಗ್ಗದಲ್ಲಿ ಅಭಿಮಾನಿಗಳಿಗೆ ವಿಜಯ್ ದರ್ಶನ !

ಬೆಂಗಳೂರು, ಡಿಸೆಂಬರ್ 14, 2019 (www.justkannada.in): ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಸದ್ಯ ಶಿವಮೊಗ್ಗ ಜೈಲಿನಲ್ಲಿ ಇದ್ದಾರೆ.

ವಿಜಯ್ ತಮಿಳುನಾಡಿನಿಂದ ಶಿವಮೊಗ್ಗ ಜೈಲುಗೆ ಬಂದಿದ್ದು ಚಿತ್ರೀಕರಣಕ್ಕಾಗಿ. ಶಿವಮೊಗ್ಗ ಹಳೆ ಜೈಲಿನಲ್ಲಿ ದಳಪತಿ 64 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇಡೀ ಚಿತ್ರತಂಡ ಶಿವಮೊಗ್ಗ ಜೈಲಿನಲ್ಲಿ ಬೀಡುಬಿಟ್ಟಿದೆ.

ಕಳೆದ ಒಂದು ವಾರದಿಂದ ಶಿವಮೊಗ್ಗ ಜೈಲಿನಲ್ಲಿ ಇರುವ ವಿಜಯ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಿವಮೊಗ್ಗದ ಜೈಲು ಆವರಣದಲ್ಲಿ ಚಿತ್ರೀಕರಣ ಮಾಡುತ್ತಿದ್ದರೆ ಗೇಟ್ ಮುಂದೆ ಅಭಿಮಾನಿಗಳು ಕಾಯುತ್ತ ನಿಂತಿರುತ್ತಾರೆ. ಇನ್ನು ವಿಜಯ್ ತಂಗಿರುವ ಹೋಟೆಲ್ ಮುಂಬಾಗದಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ.