ಕುರುಕ್ಷೇತ್ರದ ‘ಕ್ರೇಜಿ’ ಕೃಷ್ಣನಿಗೆ ರುಕ್ಮಿಣಿಯಾದ ಪ್ರಗ್ಯಾ ಜೈಸ್ವಾಲ್ !

Promotion

ಬೆಂಗಳೂರು, ಆಗಸ್ಟ್ 09, 2019 (www.justkannada.in): ಬಹುನಿರೀಕ್ಷಿತ ‘ಕುರುಕ್ಷೇತ್ರ’ ಸಿನಿಮಾ ನಾಳೆ ( ಆ.9) ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

ಇನ್ನು ಚಿತ್ರದಲ್ಲಿ ಕೃಷ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಆದರೆ ರಾಧೆ, ರುಕ್ಮಿಣಿ ಯಾರು ಎಂಬುದನ್ನು ಚಿತ್ರತಂಡ ಬಹಿರಂಗಗೊಳಿಸಿರಲಿಲ್ಲ.

ಇದೀಗ ಆ ವಿಷಯ ಬಹಿರಂಗಗೊಂಡಿದೆ. ರುಕ್ಮಿಣಿ. ಪಾತ್ರಕ್ಕೆ ಬಣ್ಣ ಹಚ್ಚಿರುವುದು ಟಾಲಿವುಡ್ ನಟಿ ಪ್ರಗ್ಯಾ ಜೈಸ್ವಾಲ್. ‘ಜಯ ಜಾನಕಿ ನಾಯಕ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದ ಪ್ರಗ್ಯಾ ಇಲ್ಲಿ ರವಿಮಾಮ ಜೋಡಿಯಾಗಿ ಕಾಣಿಸಲಿದ್ದಾರೆ.

ಈ ಪಾತ್ರದ ಬಗ್ಗೆ ಹಿಂದೆ ಚಿತ್ರತಂಡ ಎಲ್ಲೂ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಆದರೀಗ ಸಿನಿಮಾ ಬಿಡುಗಡೆಗೆ ಒಂದು ದಿನ ಮುನ್ನ ಕೃಷ್ಣನ ರುಕ್ಮಿಣಿ ಯಾರೆಂಬ ಗುಟ್ಟು ರಟ್ಟಾಗಿದೆ.