ಸಾಯುತ್ತಿರುವ ಸಿನಿರಂಗವನ್ನು ಉಳಿಸಿ, ಥಿಯೇಟರ್ ಒಪೆನ್ ಮಾಡಲು ಅನುಮತಿ ನೀಡಿ ಎಂದ ಕಂಗನಾ

Promotion

ಬೆಂಗಳೂರು, ಸೆಪ್ಟೆಂಬರ್ 8, 2021 (www.justkannada.in): ಚಿತ್ರಮಂದಿರಗಳನ್ನು ತೆರೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಟಿ ಕಂಗನಾ ರಣಾವತ್​ ಬೇಡಿಕೆ ಇಟ್ಟಿದ್ದಾರೆ.

ಥಲೈವಿ ರಿಲೀಸ್​ಗೂ ಮುನ್ನ ಚಿತ್ರಮಂದಿರಗಳನ್ನು ತೆರೆಯುವಂತೆ ಕೋರಿಕೆ ಸಲ್ಲಿಸಿರುವ ಕಂಗನಾ, ಈ ಸಾಯುತ್ತಿರುವ ಸಿನಿಮಾ ಇಂಡಸ್ಟ್ರಿಯನ್ನು ಬಚಾವ್​ ಮಾಡುವಂತೆ ಕೇಳಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್​ಗಳು, ಹೋಟೆಲ್​, ಆಫೀಸು, ಸ್ಥಳೀಯ ರೈಲು ಹೀಗೆ ಎಲ್ಲವೂ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಹೀಗಾಗಿ ಥಿಯೇಟರ್ ಗೂ ಅವಕಾಶ ನೀಡುವಂತೆ ಕೋರಿದ್ದಾರೆ.

key words: actress kangana appeal to reopen theaters