ಅಮಲಾ ಪೌಲ್ ಚಿತ್ರಕ್ಕೆ ‘ಎ’ ಸರ್ಟೀಫಿಕೇಟ್ ಕೊಟ್ಟ ಫಿಲಂ ಚೇಂಬರ್

Promotion

ಬೆಂಗಳೂರು, ಜೂನ್ 4, 2019 (www.justkannada.in): ನಟಿ ಅಮಲಾ ಪೌಲ್ ಮುಂದಿನ ಚಿತ್ರ ‘ಅಡೈ’ ಫಸ್ಟ್ ಲುಕ್ ಬಿಡುಗಡೆಯಾದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದೆ.

ಚಿತ್ರದ ಫಸ್ಟ್ ಲುಕ್ ನಲ್ಲೇ ಅಮಲಾ, ಕೈಯ್ಯಲ್ಲಿ ಕತ್ತಿ ಹಿಡಿದು, ಜೋರಾಗಿ ಅಳುತ್ತಾ ಅರೆ ನಗ್ನವಾಗಿ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಈ ಪೋಸ್ಟರ್ ನೋಡಿದ ನೆಟ್ಟಿಗರು ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಎಂದು ಕಾಲೆಳೆದಿದ್ದರು.

ಅಮಲಾ ಈ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಬಗ್ಗೆ ಸೂಚನೆ ನೀಡಿತ್ತು. ಆದರೆ ಇದೀಗ ಸೆನ್ಸಾರ್ ಬೋರ್ಡ್ ಈ ಚಿತ್ರವನ್ನು ಪ್ರೌಢರು, ವಯಸ್ಕರು ಮಾತ್ರ ನೋಡಬೇಕೆಂದು ‘ಎ’ ಸರ್ಟಿಫಿಕೇಟ್ ಕೊಟ್ಟಿದೆ.