ಶೂಟಿಂಗ್’ಗೆ ಬ್ರೇಕ್: ತೋಟದಲ್ಲಿ ಆಶಿಕಾ ಮಾವಿನ ಕೊಯ್ಲು !

Promotion

ಬೆಂಗಳೂರು, ಮೇ 27, 2021 (www.justkannada.in): ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಮಾವಿನ ಹಣ್ಣು ಕೊಯ್ಲಿನಲ್ಲಿ ಬ್ಯುಸಿಯಾಗಿದ್ಧಾರೆ!

ಹೌದು. ಲಾಕ್ ಡೌನ್ ನಿಂದ ತೋಟದ ಮನೆ ಸೇರಿರುವ ಆಶಿಕಾ ಮಾವಿನ ತೋಟದಲ್ಲಿ ಕಾಲ ಕಳೆಯುತ್ತಿದ್ದಾರೆ.

ಕುಟುಂಬದವರ ಜೊತೆ ತೋಟದ ಕೆಲಸ ಮಾಡುತ್ತ ಸಮಯ ಕಳೆಯುತ್ತಿರುವ ಆಶಿಕಾ ಕೆಲ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಾವಿನ ಹಣ್ಣುಗಳು, ತರಕಾರಿಗಳನ್ನು ಕೊಯ್ದು ಬುಟ್ಟಿಯಲ್ಲಿ ಸಂಗ್ರಹಿಸಿ ಹೊತ್ತು ತರುತ್ತಿರುವ ಫೋಟೋ ಕಂಡು ಅಭಿಮಾನಿಗಳು ಲೈಕ್ ಮಾಡಿದ್ದಾರೆ.