ಐಶಾರಾಮಿ ಬೋಟ್ ನಲ್ಲಿ ಮಗನ ಬರ್ತ್ ಡೇ ಸೆಲೆಬ್ರೆಟ್ ಮಾಡಿದ ರಾಕ್ಹಿಂಗ್ ಸ್ಟಾರ್ !

Promotion

ಬೆಂಗಳೂರು, 07, ನವೆಂಬರ್ 2020: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಗ ಯಥರ್ವ್ ಯಶ್ ಬರ್ತ್ ಡೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೊರೋನಾ ಕಾರಣದಿಂದ ಯಥರ್ವ್ ಬರ್ತ್ ಡೇಯನ್ನು ರಾಕಿಂಗ್ ದಂಪತಿ ಖಾಸಗಿಯಾಗಿ ಸಂಭ್ರಮಾಚರಣೆ ಮಾಡಿದ್ದರು. ಗೋವಾದ ಕಡಲತಡಿಯಲ್ಲಿ ಯಶ್, ರಾಧಿಕಾ, ಐರಾ, ರಾಧಿಕಾ ಪೋಷಕರು ಜತೆಯಾಗಿ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರು ಕ್ಯೂಟ್ ಫ್ಯಾಮಿಲಿ ಎಂದು ಕಾಮೆಂಟ್ ಮಾಡಿದ್ದಾರೆ. ಐಶಾರಾಮಿ ಬೋಟ್ ನಲ್ಲಿ ಕೇಕ್ ಕಟ್ ಮಾಡಿ ಅದ್ಧೂರಿಯಾಗಿ ಯಥರ್ವ್ ಬರ್ತ್ ಡೇ ಆಚರಣೆ ಮಾಡಲಾಗಿದೆ.