ಕಿರುತೆರೆಗೆ ಎಂಟ್ರಿ ಕೊಟ್ಟ ಯಶ್‌ ತಾಯಿ ಪುಷ್ಪಾ!

Promotion

ಬೆಂಗಳೂರು, ಜನವರಿ 10, 2020 (www.justkannada.in): ರಾಕಿಂಗ್ ಸ್ಟಾರ್ ಯಶ್‌ ಅವರ ತಾಯಿ ಪುಷ್ಪಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ!

ಹೌದು. ‘ಸ್ಟಾರ್‌ ಸುವರ್ಣ’ ವಾಹಿನಿಯ ‘ಬೊಂಬಾಟ್‌ ಭೋಜನ’ ಕಾರ್ಯಕ್ರಮದಲ್ಲಿ ಯಶ್ ತಾಯಿ ಕಾಣಿಸಿಕೊಳ್ಳಲಿದ್ದಾರೆ.

ಸಿಹಿ ಕಹಿ ಚಂದ್ರು ಈ ಕಾರ್ಯಕ್ರಮದ ನಿರೂಪಕರು. ಅವರ ಜೊತೆ ಯಶ್(Yash)‌ ಬಗ್ಗೆ ಅನೇಕ ವಿಚಾರಗಳನ್ನು ಪುಷ್ಪಾ ಹಂಚಿಕೊಂಡಿದ್ದಾರೆ. (ಜ.8) ಪ್ರಯುಕ್ತ ಈ ಎಪಿಸೋಡ್‌ ಪ್ರಸಾರ ಆಗಿದೆ.

ಯಶ್‌ ಮೂಲತಃ ಹಾಸನದವರು. ಅಲ್ಲಿಂದಲೇ ಗಿಣ್ಣದ ಹಾಲನ್ನು ತೆಗೆದುಕೊಂಡು ಬಂದು, ಈ ಕಾರ್ಯಕ್ರಮದಲ್ಲಿ ರುಚಿಯಾದ ಗಿಣ್ಣು ತಯಾರಿಸಿದ್ದಾರೆ ಯಶ್‌ ತಾಯಿ.