ಚಿತ್ರೀಕರಣದ ವೇಳೆ ನಟ ವಿಶಾಲ್’ಗೆ ಗಂಭೀರ ಗಾಯ

Promotion

ಬೆಂಗಳೂರು, ಆಗಸ್ಟ್ 12, 2022 (www.justkannada.in): ತಮಿಳು ನಟ ವಿಶಾಲ್ ಅವರು ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.

ಬಹುನಿರೀಕ್ಷಿತ `ಮಾರ್ಕ್ ಆಯಂಟನಿ’ ಸಿನಿಮಾ ಶೂಟಿಂಗ್ ವೇಳೆಯಲ್ಲಿ ವಿಶಾಲ್‌ಗೆ ಗಂಭೀರ ಗಾಯವಾಗಿದೆ.

ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಚಿತ್ರೀಕರಣದಲ್ಲಿ ಸ್ಟಂಟ್ ಮಾಡುವಾಗ ವಿಶಾಲ್ ಏಟು ಮಾಡಿಕೊಂಡಿದ್ದರು.

ಕಾಲಿವುಡ್ ನಟ ವಿಶಾಲ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಇತ್ತೀಚಿಗೆ ಚಿತ್ರೀಕರಣದ ವೇಳೆ ಗಾಯಗೊಳ್ಳುವ ಮೂಲಕ ಸುದ್ದಿ ಆಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.