ಬಲಪಂಥೀಯ ಟ್ರೋಲ್ ಗಳು :’ಹೋಗಿ ಬೇರೆ ಕೆಲಸ ನೋಡಿ’ ಎಂದ ವಿಜಯ್ ಸೇತುಪತಿ

Promotion

ಬೆಂಗಳೂರು, ಫೆಬ್ರವರಿ 15, 2019 (www.justkannada.in): ತೆರಿಗೆ ಇಲಾಖೆಯು ನಟ ವಿಜಯ್ ಮನೆ ಮೇಲೆ ದಾಳಿ ನಡೆಸಿದ ನಂತರ ಬಲಪಂಥೀಯ ಟ್ರೋಲ್ ಗಳು ಈ ಪ್ರಕರಣಕ್ಕೆ ಕೋಮುಬಣ್ಣ ಬಳಿದಿತ್ತು.

ವಿಶೇಷವಾಗಿ ಏನನ್ನೂ ವಿಜಯ್ ಮನೆಯಿಂದ ವಶಪಡಿಸಿಕೊಂಡಿಲ್ಲ ಎಂದು ಸ್ವತಃ ಆದಾಯ ತೆರಿಗೆ ಇಲಾಖೆ ಖಚಿತಪಡಿಸಿದ್ದರೂ ಬಲಪಂಥೀಯ ಟ್ರೋಲ್ ಗಳು ಸುಳ್ಳುಗಳನ್ನು ಹರಡಲು ಆರಂಭಿಸಿದವು.

ತಮಿಳುನಾಡಿನಲ್ಲಿ ‘ಕ್ರೈಸ್ತ ಮತಾಂತರ’ ನೆಟ್ ವರ್ಕ್ ನ ಭಾಗವಾಗಿ ವಿಜಯ್, ವಿಜಯ್ ಸೇತುಪಥಿ ಸೇರಿ ಹಲವು ನಟರು, ಕೈಗಾರಿಕೋದ್ಯಮಿಗಳು ಇದ್ದಾರೆ. ಇವರೆಲ್ಲಾ ಈ ಕೆಲಸಕ್ಕೆ ಹಣ ಒದಗಿಸುತ್ತಿದ್ದಾರೆ ಎಂದು ಟ್ರೋಲ್ ಗಳು ಸುಳ್ಳು ಹರಡಿದ್ದವು.

ಈ ಎಲ್ಲ ಟ್ರೋಲ್ ಗಳಿಗೆ ತಿರುಗೇಟು ನೀಡಿದ ‘ಮಕ್ಕಳ್ ಸೆಲ್ವನ್’ ಖ್ಯಾತಿಯ ನಟ ವಿಜಯ್ ಸೇತುಪತಿ ‘ಹೋಗಿ ಬೇರೆ ಕೆಲಸ ನೋಡಿ’ ಎಂದಿದ್ದಾರೆ.