Friday, September 11, 2026

BDA Apartments

ಉತ್ತಮ ಚಿತ್ರಗಳನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ ನಟ ಸಂಚಾರಿ ವಿಜಯ್ BDA JK_Adv BDA...
Home Cinema ಉತ್ತಮ ಚಿತ್ರಗಳನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ ನಟ ಸಂಚಾರಿ ವಿಜಯ್

ಉತ್ತಮ ಚಿತ್ರಗಳನ್ನು ಕೈ ಬಿಡಬೇಡಿ ಎಂದು ಮನವಿ ಮಾಡಿದ ನಟ ಸಂಚಾರಿ ವಿಜಯ್

ಬೆಂಗಳೂರು, ಫೆಬ್ರವರಿ 15, 2019 (www.justkannada.in): ಉತ್ತಮ ಚಿತ್ರಗಳ ಕೈಬಿಡಬೇಡಿ ಎಂದು ನಟ ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ.

ಸಿನಿಮಾವನ್ನು ಉಳಿಸಿಕೊಡಿ. ಒಳ್ಳೆಯ ಸಿನಿಮಾ ಮಾಡಿದಾಗಲೂ ಚಿತ್ರಮಂದಿರದಿಂದ ತೆಗೆದಿದ್ದಾರೆ. ‘ಜಂಟಲ್ ಮ್ಯಾನ್’ ಜನರಿಗೆ ತಲುಪುತ್ತಿದೆ. ಶನಿವಾರ ಮತ್ತು ಭಾನುವಾರ ಸಿನಿಮಾ ನೋಡಿ. ಹಾಗಾದರೆ, ಸೋಮವಾರದಿಂದ ಸಿನಿಮಾ ಮುಂದೆ ಹೋಗುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಮನವಿ ಮಾಡಿದ್ದಾರೆ.

ಇದೇ ಸಿನಿಮಾ ಬೇರೆ ಭಾಷೆಯಲ್ಲಿ ಬಂದಿದ್ದರೆ, ನಾವು ಕನ್ನಡಿಗರೇ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ. ಈಗ ಈ ಚಿತ್ರವನ್ನು ಉಳಿಸಿಕೊಡಿ.” – ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.