ವಿಜಯ್ ದೇವರಕೊಂಡ ಬರ್ತ್ ಡೇ ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ರಶ್ಮಿಕಾ ಮಂದಣ್ಣ

Promotion

ಬೆಂಗಳೂರು: ಮೇ-12:(www.justkannada.in) ತೆಲುಗು ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬದಂದು ‘ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ’ ಎಂದು ವಿಶೇಷವಾಗಿ ವಿಶ್ ಮಾಡಿ ಗಮನ ಸೆಳೆದಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ವಿಜಯ್ ಬರ್ತ್ ಡೇಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದ್ದಾರೆ.

ನಟ ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೇಡ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಶೂಟಿಂಗ್ ಸೆಟ್‍ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದೆ. ಈ ವೇಳೆ ರಶ್ಮಿಕಾ ಕೂಡ ಭಾಗವಹಿಸಿದ್ದು, ವಿಜಯ್ ಗೆ ರಶ್ಮಿಕಾ ಬ್ರಾಸ್ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೇ ಸ್ಪೆಷಲ್ ಕೇಕ್ ಕಟ್ ಮಾಡಿ, ಸ್ವತ: ರಶ್ಮಿಕಾ ವಿಜಯ್‍ಗೆ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.

ರಶ್ಮಿಕಾ ಕೊಟ್ಟ ಗಿಫ್ಟ್ ಅನ್ನು ಶೂಟಿಂಗ್ ಸೆಟ್‍ನಲ್ಲಿಯೇ ವಿಜಯ್ ಓಪನ್ ಮಾಡಿದ್ದು, ಮೊದಲು ಅದನ್ನು ರಶ್ಮಿಕಾ ಕೈಗೆ ಹಾಕಿ ನಂತರ ತಮ್ಮ ಕೈಗೆ ಹಾಕಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಬರ್ತ್ ಡೇ ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ರಶ್ಮಿಕಾ ಮಂದಣ್ಣ

Actor vijay devarakonda gets a special gift from rashmika