ರಿಯಲ್ ಸ್ಟಾರ್-ಡಿಂಪಲ್ ಕ್ವೀನ್ ‘ಐ ಲವ್ ಯು’ ರೊಮ್ಯಾನ್ಸ್ !

Promotion

ಬೆಂಗಳೂರು, ಜೂನ್ 14, 2019 (www.justkannada.in): ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಐ ಲವ್​ ಯು ಸಿನಿಮಾ ಇಂದು ತೆರೆಗೆ ಬರುತ್ತಿದೆ.

ಈ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಉಪೇಂದ್ರ ಅಭಿನಯದ ಉಪ್ಪಿ 2 ಸಿನಿಮಾ ನಂತರ ಅಂತದ್ದೊಂದು ಕ್ರೇಜ್​ ಹುಟ್ಟುಹಾಕಿರೋ ಸಿನಿಮಾ ಐ ಲವ್​ಯೂ .

ಈ ಚಿತ್ರದಲ್ಲಿ ಉಪ್ಪಿ 3 ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಡಿಂಪಲ್​ ಕ್ವೀನ್ ರಚಿತಾ ರಾಮ್‌ ಉಪ್ಪಿಗೆ ಜೋಡಿಯಾಗಿದ್ದಾರೆ. ಚಿತ್ರದ ಸ್ಟೋರಿಲೈನ್​ ಬಗ್ಗೆ ಈವರೆಗು ಮಾಹಿತಿ ಬಿಟ್ಟುಕೊಡದ ನಿರ್ದೇಶಕ ಆರ್ ಚಂದ್ರು ಉಪ್ಪಿಯನ್ನು ಅದ್ಬುತವಾಗಿ ತೆರೆಮೇಲೆ ತೋರಿಸಲಿದ್ದಾರೆ ಎಂಬುದನ್ನು ಟೀಸರ್ ತೋರಿಸಿದೆ.