ನಾಳೆ ಹ್ಯಾಟ್ರಿಕ್ ಹೀರೋ ಬರ್ತ್ ಡೇ: ಮನೆಯಿಂದಲೇ ವಿಶ್ ಮಾಡಿ ಎಂದ ಶಿವಣ್ಣ

Promotion

ಬೆಂಗಳೂರು, ಜುಲೈ 11, 2020 (www.justkannada.in): ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಿಂದ ಆಚರಣೆ ಮಾಡದೇ ಇರಲು ಹ್ಯಾಟ್ರಿಕ್ ಹೀರೋ ಶಿವಣ್ಣ ನಿರ್ಧರಿಸಿದ್ದಾರೆ.

ಅಭಿಮಾನಿಗಳು ಮನೆಯಿಂದಲೇ ನನಗೆ ಶುಭಾಶಯ ಕೋರಬಹುದು ಎಂದು ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ ಹ್ಯಾಟ್ರಿಕ್ ಹೀರೋ.

ನನ್ನನ್ನು ಭೇಟಿ ಮಾಡಲು ಅಭಿಮಾನಿಗಳು ಯತ್ನಿಸಬೇಕಿಲ್ಲ. ಈಗಾಗಲೇ ಅಭಿಮಾನಿಗಳಿಂದ ಸಾಕಷ್ಟು ಉಡುಗೊರೆಗಳು ಬಂದಿವೆ, ಈ ಪೈಕಿ ವಿಶೇಷವಾದ ಹಾಡು ಸಹ ಇದೆ. ಅವರ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಿವಣ್ಣ ಹೇಳಿದ್ದಾರೆ.