ಈ ಶುಕ್ರವಾರ (ಜೂ.28) ತೆರೆ ಮೇಲೆ ‘ರುಸ್ತುಂ’ ಹವಾ !

Promotion

ಬೆಂಗಳೂರು, ಜೂನ್ 24, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಇದೇ ಶುಕ್ರವಾರ (ಜೂನ್ 28)  ಬಿಡುಗಡೆಯಾಗಲಿದೆ.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣ ಮಾಡಿರುವ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸಿದ್ದಾರೆ. ರವಿವರ್ಮ ನಿರ್ದೇಶನದ ಮೊದಲ ಚಿತ್ರ ಇದಾಗಿದೆ.

ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಕರಾಗಿದ್ದಾರೆ. ಇದೇ ಶುಕ್ರವಾರ ‘ರುಸ್ತುಂ’ ಬಿಡುಗಡೆಯಾಗುತ್ತಿದ್ದು, ಚಿತ್ರದ ಕುರಿತಾಗಿ ನಿರೀಕ್ಷೆ ಹೆಚ್ಚಾಗಿದೆ.