ರಾಜಕೀಯಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ ನಟ ಸೂಪರ್ ಸ್ಟಾರ್ ರಜನಿಕಾಂತ್.

Promotion

ಚೆನ್ನೈ,ಜುಲೈ,12,2021(www.justkannada.in): ರಾಜಕೀಯದಿಂದ ದೂರ ಉಳಿದಿದ್ದ ನಟ ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ರಾಜಕೀಯಕ್ಕೆ  ಗುಡ್ ಬೈ ಹೇಳಿದ್ದಾರೆ.jk

ಹೌದು, ನಟ ರಜನಿಕಾಂತ್ ರಾಜಕೀಯಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.ಕೇವಲ ಅಭಿಮಾನಿಗಳ ಸಂಘ ಉಳಿಸಿಕೊಂಡು ರಾಜಕೀಯ ಪಕ್ಷವನ್ನ ನಟ ರಜನಿಕಾಂತ್ ವಿಸರ್ಜಿಸಿದ್ದು ಈ ಬಗ್ಗೆ  ಚೆನ್ನೈನ ಪೋಯಸ್ ಗಾರ್ಡನ್ ಬಳಿ ಘೋಷಣೆ ಮಾಡಿದ್ದಾರೆ.

ರಜಿನಿ ಮಕ್ಕಳ್ ಮನ್ರಂ ನಿರ್ವಾಹಕರ ಜತೆ ಸಭೆ ನಡೆಸಿ ಬಳಿಕ ರಜಿನಿಕಾಂತ್ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ. ಸೂಪರ್ ಸ್ಟಾರ್ ಖ್ಯಾತಿಯ ರಜನೀಕಾಂತ್ ಅವರು ಕಳೆದ ವರ್ಷ ತನ್ನ ಆರೋಗ್ಯವನ್ನು ಉಲ್ಲೇಖಿಸಿ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು. ಇದೀಗ ರಾಜಕೀಯ ರಿಎಂಟ್ರಿಗೆ ತೆರೆ ಎಳೆದಿದ್ದಾರೆ.

ENGLISH SUMMARY…..

Superstar Rajnikanth bids good bye to politics officially
Chennai, July 12, 2021 (www.justkannada.in): Superstar Rajnikanth, who was maintaining distance from politics for sometime has bid goodbye to politics officially.
He has announced winding off his political party, retaining just his fans association. He made this announcement at the Poes Garden in Chennai.
He has made this announcement after discussing it with the Manager of the Rajini Makkal Manram. It can be recalled here that last year the superstar had announced to stay away from politics due to his health condition. Now he has pulled the curtains down for his political entry.
Keywords: Superstar/ Rajnikanth/ bids good by to politics/ Chennai / official

Key words: actor-Rajinikanth – officially -goodbye – politics