ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದವರನ್ನ ಸಿನಿಮೀಯ ರೀತಿ ಚೇಸ್ ಮಾಡಿ ಹಿಡಿದು ಪೊಲೀಸರಿಗೊಪ್ಪಿಸಿದ ನಟ…

Promotion

ಬೆಂಗಳೂರು,ಡಿ,27,2019(www.justkannada.in):   ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ ದರೋಡೆಕೋರರನ್ನ ನಟರೊಬ್ಬರು ಸಿನಿಮೀಯ ರೀತಿ ಚೇಸ್ ಮಾಡಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಟ ರಘುಭಟ್  ಎಂಬುವವರು ದರೋಡೆ ಕೋರರನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.  ಅಬ್ದುಲ್ ಮತ್ತು ಮೊಹೀನ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ನಗರದ ಆರ್ ಎಂ ಝಡ್  ಬಳಿ ಕಾರೊಂದನ್ನ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದರು.

ಸಿನಿಮಾ ನೋಡಿ ವಾಪಸ್ ಬರುತ್ತಿದ್ದ ನಟ ರಘುಭಟ್ ಅವರು ದರೋಡೆಕೋರರನ್ನ ಸುಮಾರು 2 ಕಿ. ಮೀ ನಷ್ಟು ಚೇಸ್ ಮಾಡಿ ಹಿಡಿದಿದ್ದಾರೆ. ಸೆಂಟ್ ಜಾನ್ ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಚೇಸ್ ವೇಳೆ ಆರೋಪಿಗಳು ಸೆಲ್ಫ್ ಆಕ್ಸಿಡೆಂಟ್ ಮಾಡಿಕೊಂಡಿದ್ದು, ಅವರನ್ನ ಹಿಡಿದು ನಟ ರಘುಭಟ್ ಹಲಸೂರು ಠಾಣಾ ಪೊಲೀಸರಿಗೊಪ್ಪಿಸಿದ್ದರು. ನಂತರ ಆರೋಪಿಗಳನ್ನ ಆಸ್ಪತ್ರೆಗೆ ಸೇರಿಸಲಾಗಿದೆ.

ನಟ ರಘು ಭಟ್ ‘ಅನ್ವೇಷಿ’, ‘ಎಂಎಂಸಿಎಚ್’, ‘ಲವ್ ಯೂ 2’ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.

Key words: actor –raghubhat- chase -robber –escape-police-bangalore