ಹೃದಯಾಘಾತದಿಂದ  ನಟ ಅಪ್ಪು ಅಭಿಮಾನಿ ಸಾವು.

Promotion

ಬೆಂಗಳೂರು,ಅಕ್ಟೋಬರ್,22,2022(www.justkannada.in): ಪುನೀತಪರ್ವ ಕಾರ್ಯಕ್ರಮ ನೋಡುವ ವೇಳೆ ನಟ ದಿ.ಪುನೀತ್ ರಾಜ್ ಕುಮಾರ್ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಲ್ಲೇಶ್ವರಂ ಲಿಂಕ್ ರೋಡ್ ನ  ನಿವಾಸಿ ಗಿರಿರಾಜ್ ಮೃತಪಟ್ಟಿದ್ದಾರೆ. ನಿನ್ನೆ ಪುನೀತ ಪರ್ವ ಕಾರ್ಯಕ್ರಮ ನೋಡುವ ವೇಳೆ ಗಿರಿರಾಜ್ ತುಂಬಾ ಭಾವುಕರಾಗಿದ್ದರು. ಗಿರಿರಾಜ್ ಮನೆಯಲ್ಲಿ ಅಪ್ಪು ಆರಾಧನೆ ಮಾಡುತ್ತಿದ್ದರು. ಪುನೀತ್ ಅವರ ಫೋಟೋಗೆ ಮುತ್ತಿನ ಹಾರ ಹಾಕಿದ್ಧ ಗಿರಿರಾಜ್ ವಾಟ್ಸಪ್ ಫೇಸ್ ಬುಕ್ ಗೆ ಪುನೀತ್ ಅವರ ಫೋಟೋವನ್ನೇ ಹಾಕಿಕೊಂಡಿದ್ದರು.

ಪುತ್ರ ಗಿರಿರಾಜ್ ನಿಧನದ ಬಗ್ಗೆ ಮಾತನಾಡಿರುವ ತಂದೆ ವೆಂಕಟೇಶ್, ಅಮಿತಾಬ್  ಬಚ್ಚನ್ ಮಾತಿಗೆ ಗಿರಿರಾಜ್ ತುಂಬಾ ಭಾವುಕನಾಗಿದ್ದ ಎಷ್ಟೇ ಸಮಾಧಾನ ಮಾಡಿದ್ದರೂ ಅಳುತ್ತಲೇ ಇದ್ಧ ಈ ರೀತಿ ಯಾರೂ ಜೀವಿಸೋಕೆ ಯಾರಿಂದಲೂ ಆಗಲ್ಲ ಎನ್ನುತ್ತಿದ್ದ. ನನ್ನ ಮಗನಿಗೆ ಹೃದಯ ಸಂಬಂಧಿ ಖಾಯಿಲೆ ಇರಲಿಲ್ಲ. ಬೇರೆ ಯಾರಿಗೂ ಇಂತಹ ಪರಿಸ್ಥಿತಿ ಬರೋದು ಬೇಡ ಎಂದು ಹೇಳಿದ್ದಾರೆ.

Key words: Actor-Punithraj kumar -fan -dies – heart attack.