ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ… ನಮಗೆ ನಾವೇ ಹೆಸರು ಮಾಡ್ಕೋಂಡ್ರೆ ಬೇಡಿಕೆ… ಪವರ್ ಫುಲ್ ಡೈಲಾಗ್ ಹೇಳಿದ ಅಪ್ಪು !

Promotion

ಬೆಂಗಳೂರು, ಜನವರಿ 20, 2019 (www.justkannada.in): ಪವರ್ ಸ್ಟಾರ್ ‘ಜೇಮ್ಸ್’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಸಿನಿಮಾದ ಮೊದಲ ಶಾಟ್ ನಲ್ಲಿ ಪುನೀತ್ ಚಿತ್ರದ ಡೈಲಾಗ್ ಹೇಳಿದ್ದಾರೆ. ”ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ… ನಮಗೆ ನಾವೇ ಹೆಸರು ಮಾಡ್ಕೋಂಡ್ರೆ ಬೇಡಿಕೆ…” ಎಂದು ಅಪ್ಪು ಡೈಲಾಗ್ ಹೊಡೆದಿದ್ದಾರೆ.

ಈ ಡೈಲಾಗ್ ‘ಜೇಮ್ಸ್’ ಸಿನಿಮಾದ ಪೋಸ್ಟರ್ ನಲ್ಲಿ ಬಹಳ ದಿನಗಳಿಂದ ಇತ್ತು. ಆದರೆ, ಇದೀಗ ಪುನೀತ್ ಬಾಯಲ್ಲೇ ಅಭಿಮಾನಿಗಳು ಈ ಡೈಲಾಗ್ ಕೇಳಿದ್ದಾರೆ.