ನಟ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ.

Promotion

ಬೆಂಗಳೂರು,ಅಕ್ಟೋಬರ್,30,2021(www.justkannada.in):  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದ್ದು ಗಣ್ಯರು, ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಬಳಿ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಈ ಮಧ್ಯೆ ಸಾಲುಮರದ ತಿಮ್ಮಕ್ಕ ಅವರು ವೀಲ್ ಚೇರ್ ನಲ್ಲೇ ಆಗಮಿಸಿ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದರು. ಹಾಗೆಯೇ ನಟ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ, ನಟಿ ರಚಿತಾ ರಾಮ್ ಸೇರಿ ತೆಲುಗು ಚಿತ್ರರಂಗದ ನಟರು ಬೇರೆ ಬೇರೆ ರಾಜ್ಯಗಳ ಕಲಾವಿದರು ಆಗಮಿಸಿ ನಟ ಪುನೀತ್ ಅವರ ಅಂತಿಮ ದರ್ಶನ ಪಡೆದರು.

ಪುನೀತ್ ಅವರ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ನಟ ಚಿರಂಜೀವಿ, ‘ಪುನೀತ್‌ ಆಕಾಲಿಕ ನಿಧನ ಬಹಳ ಅನ್ಯಾಯ, ಕಷ್ಟಕರವಾಗಿದೆ. ಭಗವಂತ ಪುನೀತ್‌ ರಾಜ್‌ಕುಮಾರ್‌ಗೆ ಅನ್ಯಾಯ ಮಾಡಿದ್ದಾರೆ. ಆ ದೇವರ ಅವ್ರ ಕುಟುಂಬಕ್ಕೆ ಆತ್ಮಸ್ಮೈರ್ಯ ತುಂಬಬೇಕು. ಬೆಂಗಳೂರಿಗೆ ಯಾವಾಗ ಬಂದ್ರೂ ಅವರನ್ನ ಭೇಟಿಯಾಗ್ತಿದ್ದೆ. ರಾಜ್‌ಕುಮಾರ್‌ ಇದ್ದಾಗ ಅವ್ರ ಮನೆಗೆ ಹೋಗುತ್ತಿದ್ದೆ. ಆದ್ರೆ, ಈಗ ತುಂಬಾನೇ ದುಃಖ ಆಗ್ತಿದೆ’ ಎಂದು  ಭಾವುಕರಾದರು.

Key words: Actor -Puneet Rajkumar – final-salumarada thimmakka