ಅಪ್ಪನ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆದು ಬಿಕ್ಕಿ ಬಿಕ್ಕಿ ಅತ್ತ ಪುತ್ರಿ ಧೃತಿ.

 

ಬೆಂಗಳೂರು,ಅಕ್ಟೋಬರ್,30,2021(www.justkannada.in):  ಅಪ್ಪನ ಸಾವಿನ ಸುದ್ದಿ ತಿಳಿದ ತಕ್ಷಣವೇ ಅಮೇರಿಕಾದಿಂದ ದೆಹಲಿ, ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿ ಇದೀಗ ಕಂಠೀರವ ಸ್ಪೇಡಿಯಂಗೆ ಆಗಮಿಸಿದ ನಟ ಪುನೀತ್ ರಾಜ್ ಕುಮಾರ್  ಪುತ್ರಿ ಧೃತಿ ಅಪ್ಪ ಪಾರ್ಥೀವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತರು.

ದೆಹಲಿಯಿಂದ ಬೆಂಗಳೂರಿನ ಏರ್ ಪೋರ್ಟ್ ಗೆ ಆಗಮಿಸಿ ಅಲ್ಲಿಂದ ಸದಾಶಿವನಗರದ ನಿವಾಸಕ್ಕೆ ತೆರಳಿ ನಂತರ ಕಂಠೀರವ ಸ್ಟೇಡಿಯಂಗೆ ಆಗಮಿಸಿದ ಪುತ್ರಿ ಧೃತಿ ಅಪ್ಪನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ತಂದೆಯ ತಲೆ ಮುಟ್ಟಿ ನಮಸ್ಕರಿಸಿದ ಪುತ್ರಿ ದೃತಿ ನಂತರ ತಾಯಿಯನ್ನ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಎಲ್ಲರ ಮನಕಲಕುವಂತಿತ್ತು.

Key words: actor-punith raj kumar- Driti- daughter