ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್ ‘ಅಪ್ಪು’.

Promotion

ಬೆಂಗಳೂರು, ಅಕ್ಟೋಬರ್,29,2021(www.justkannada.in):  ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(46) ಕೊನೆಯುಸಿರೆಳೆದಿದ್ದಾರೆ.

ಬೆಳಿಗ್ಗೆ ಜಿಮ್ ಕಸರತ್ತು ನಡೆಸುತ್ತಿದ್ದ ವೇಳೆ ಬೆಳಿಗೆಗ 11 ಗಂಟೆ ವೇಳೆಗೆ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಬಳಿಕ ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ್ದಂತ ವೈದ್ಯರು, ಅವರ ಸ್ಥಿತಿ ಗಂಭೀರಗೊಂಡಿದೆ. ಅಂತಿಮ ಹಂತದ ಎಲ್ಲಾ ಚಿಕಿತ್ಸೆ ನಡೆಸುತ್ತಿರೋದಾಗಿ ತಿಳಿಸಿದ್ದರು.

ಈ ಎಲ್ಲಾ ಬೆಳವಣಿಗೆಯ ನಂತರ, ಹೃದಯಾಘಾತಕ್ಕೆ ಒಳಗಾದ  ಅವರಿಗೆ ಕಡೆಯ ಕ್ಷಣದ ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸಿದರೂ, ಚಿಕಿತ್ಸೆಗೆ ಪ್ರತಿಸ್ಪಂದಿಸದ ಹಿನ್ನೆಲೆ, ಇಂದು ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ.

 ನೇತ್ರದಾನ..

ನಟ ಪುನೀತ್ ರಾಜ್ ಕುಮಾರ್ ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವರನಟ ಡಾ.ರಾಜ್ ಕುಮಾರ್ ನೇತ್ರದಾನದ ಪ್ರೇರಕರಾಗಿ ಸಮಾಜದ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದರು. ಇದೀಗ ಅವರ ಪುತ್ರ ಪುನೀತ್ ರಾಜ್ ಕುಮಾರ್ ಸ್ವಯಂ ನೇತ್ರದಾನ ಮಾಡುವ ಮೂಲಕ ಮಾನವೀಯತೆಯನ್ನ ಮೆರೆದಿದ್ದಾರೆ.

Key words: Actor-Puneet Raj Kumar (46) – no more.

ENGLISH SUMMARY…

Sandalwood’s Powerstar Puneeth Rajkumar no more
Bengaluru, October 29, 2021 (www.justkannada.in): Sandalwood’s popular actor Puneeth Rajkumar passed away today due to a massive heart attack. He reportedly collapsed while working out in the gym. He was admitted to the Vikram Hospital in Bengaluru, where he breathed his last. He was 46 years old.
Puneeth Rajkumar suffered a heart attack at 11.00 am today while he was in the gym. He was immediately admitted to the Ramanashree hospital and later shifted to the Vikram Hospital, where he passed away.
The family members have donated both his eyes. It can be recalled here that the family had donated both the eyes of Puneeth’s father, matinee idol Late Dr. Rajkumar after his death. Now Puneeth has joined him and has set an example to all others.
Keywords: Sandalwood actor/ Puneeth Rajkumar/ passed away/ heart attack