ಸಲ್ಮಾನ್ ಜತೆ ಕಿಚ್ಚ ಫೈಟಿಂಗ್ ಸೀನ್: ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

Promotion

ಮುಂಬೈ, ಮೇ 15, 2019 (www.justkannada.in): ಸಲ್ಮಾನ್ ಜತೆ ಕಿಚ್ಚ ಸುದೀಪ್ ಬರೀ ಮೈಯಲ್ಲಿ ಫೈಟಿಂಗ್ ಮಾಡಲಿದ್ದಾರೆ !

ಸಲ್ಮಾನ್ ಜತೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು.

ಈ ಫೋಟೋಗಳನ್ನು ಕಿಚ್ಚ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು ವೈರಲ್ ಆಗಿತ್ತು. ಇದೀಗ ಕಿಚ್ಚ ಸುದೀಪ್ ಈ ದೃಶ್ಯದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಸಲ್ಮಾನ್ ಜತೆ ಕಿಚ್ಚ ಸುದೀಪ್ ಬರೀ ಮೈಯಲ್ಲಿ ಹೊಡೆದಾಡಲಿದ್ದಾರಂತೆ. ಈ ಹೊಡೆದಾಟದ ದೃಶ್ಯವನ್ನು ತಾವು ಎಂಜಾಯ್ ಮಾಡಿದ್ದಾಗಿ ಸುದೀಪ್ ಹೇಳಿಕೊಂಡಿದ್ದಾರೆ.