ಟಾಲಿವುಡ್’ನಲ್ಲಿ ಮಿಂಚಲು ಜೆಕೆ ರೆಡಿ !

Promotion

ಬೆಂಗಳೂರು, ಮಾರ್ಚ್ 14, 2020 (www.justkannada.in): ಜಯರಾಮ್ ಕಾರ್ತಿಕ್ ಇದೀಗ ತಮಿಳು ಸಿನಿಮಾದಲ್ಲಿ ಡೆಬ್ಯೂಟ್ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಜೆಕೆಗೆ ಅಷ್ಟಾಗಿ ಯಶಸ್ಸು ಸಿಕ್ಕಿರಲಿಲ್ಲ. ಆದರೆ ಕಿರುತೆರೆಯಲ್ಲಿ ಸೂಪರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಜೆಕೆ ಹಿಂದಿ ಸಿನಿಮಾದ ಅಭಿನಯಕ್ಕೆ ಮೆಚ್ಚುಗೆ ಪಡೆದಿದ್ದರು.

ಇದೀಗ ತಮಿಳಿನಲ್ಲಿ ‘ಮಾಳಿಗೈ’ ಎಂಬ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಆಂಡ್ರಿಯಾ ಜೆರೆಮಿಯಾ ಜೆಕೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಜೆಕೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.