ನಟ ದುನಿಯಾ ವಿಜಯ್ ತಾಯಿ ಆರೋಗ್ಯ ಸ್ಥಿತಿ ಗಂಭೀರ

Promotion

ಬೆಂಗಳೂರು, ಜುಲೈ 06, 2021 (www.justkannada.in): ನಟ ದುನಿಯಾ ವಿಜಯ್ ತಾಯಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಿಜಯ್ ತಾಯಿ ನಾರಾಯಣಮ್ಮ ಹಾಸಿಗೆ ಹಿಡಿದಿದ್ದರು.

ಅಮ್ಮನ ಆರೋಗ್ಯ ಕುರಿತು ದುನಿಯಾ ವಿಜಯ್ ಸಹ ಪ್ರತಿಕ್ರಿಯಿಸಿದ್ದಾರೆ. ವೈದ್ಯರು ಖುದ್ದು ಮನೆಗೆ ಬಂದು ವಿಜಯ್ ಅವರ ತಾಯಿಯ ಆರೋಗ್ಯ ವಿಚಾರಿಸಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.

ಆಸ್ಪತ್ರೆಗೆ ಸೇರಲು ನಾರಾಯಣಮ್ಮನಿಗೆ ಇಷ್ಟವಿಲ್ಲದ ಕಾರಣ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯ್ ತಿಳಿಸಿದ್ದಾರೆ.