ಹಿಂದಿಗೆ ಯೂಟರ್ನ್ ರಿಮೇಕ್: ಶ್ರದ್ಧಾ ಪಾತ್ರದಲ್ಲಿ ಅಲಾಯಾ

ಬೆಂಗಳೂರು, ಜುಲೈ 06, 2021 (www.justkannada.in): ‘ಯು-ಟರ್ನ್’ ಇದೀಗ ಹಿಂದಿಗೆ ರೀಮೇಕ್ ಆಗುತ್ತಿದೆ. ಇದರಲ್ಲಿ ಯುವ ನಟಿ ಅಲಾಯಾ ನಟಿಸುತ್ತಿದ್ದಾರೆ.

ಐದು ವರ್ಷದ ಹಿಂದೆ ಬಿಡುಗಡೆ ಆಗಿದ್ದ ಸಿನಿಮಾದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ನಟಿಸಿದ್ದರು.

ನಿರ್ಮಾಪಕಿ ಏಕ್ತಾ ಕಪೂರ್ ಈ ಕನ್ನಡ ಸಿನಿಮಾ ‘ಯು-ಟರ್ನ್’ ಅನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದು ನಿರ್ದೇಶನವನ್ನು ಆರಿಫ್ ಖಾನ್ ಮಾಡಲಿದ್ದಾರೆ.

ಏಕ್ತಾ ಕಪೂರ್ ಒಡೆತನದ ‘ಕಲ್ಟ್ ಮೂವೀಸ್’ ಪ್ರೊಡಕ್ಷನ್‌ ಹೌಸ್‌ನಿಂದ ಈ ಸಿನಿಮಾ ನಿರ್ಮಾಣವಾಗುತ್ತಿದೆ.

ಗುಜರಾತಿ, ಮರಾಠಿ, ಮಲಯ, ಚೀನಿ, ಥಾಯ್ ಭಾಷೆಗಳಲ್ಲಿ ರೀಮೇಕ್ ಆಗಲಿದೆ ಎಂದು ಪವನ್ ಕುಮಾರ್ ಈ ಹಿಂದೆಯೇ ತಿಳಿಸಿದ್ದರು.