ಮಂಡ್ಯ ಜನತೆಯ ಗಿಫ್ಟ್ ಉಳಿಸಿಕೊಂಡು ಹೋಗೋದು ನಮ್ಮ ಕೆಲಸ- ಕಾವೇರಿ ನೀರು ಬಿಡುಗಡೆ ವಿಚಾರ ಕುರಿತು ನಟ ದರ್ಶನ್ ಪ್ರತಿಕ್ರಿಯೆ ಏನು ಗೊತ್ತೆ…?

Promotion

ಮೈಸೂರು,ಮೇ, 29,2019(www.justkannada.in): ಅಮ್ಮನನ್ನ ಗೆಲ್ಲಿಸುವ ಮೂಲಕ  ಮಂಡ್ಯ ಜನತೆ ಸ್ವಾಭಿಮಾನಿಗಳೆಂದು ತೋರಿಸಿದ್ದಾರೆ. ಅವರು ಕೊಟ್ಟಿರುವ ಗಿಫ್ಟ್ ಉಳಿಸಿಕೊಂಡು ಹೋಗುವುದೇ ನಮ್ಮ ಕೆಲಸ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನ ಗೆಲ್ಲಿಸಿದ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಲು ಸಂಸದೆ ಸುಮಲತಾ ಅಂಬರೀಶ್ ಸಮಾವೇಶ ಆಯೋಜಿಸಿದ್ದಾರೆ. ಈ ಕುರಿತು ಮಾತನಾಡಿರುವ ನಟ ದರ್ಶನ್, ಅಮ್ಮನನ್ನು ಗೆಲ್ಲಿಸಿದ ಮಂಡ್ಯದ ಜನರಿಗೆ ಕೃತಜ್ಞತೆ ಹೇಳುವುದು ಅಂದ್ರೆ ತುಂಬಾ ಚಿಕ್ಕ ಮಾತಾಗುತ್ತೆ. ಆದ್ರಿಂದ ಕೃತಜ್ಞತೆ ಹೇಳುವುದಕ್ಕಿಂತ ಹೆಚ್ಚಾಗಿ ನಾವು ಸಾಯುವವರೆಗೂ ಮಂಡ್ಯ ಜನರಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದ್ದಾರೆ.

ಪ್ರಚಾರದ ಸಮಯದಲ್ಲಿ ಟೀಕೆ-ಟಿಪ್ಪಣಿ ಎಲ್ಲ ಸಹಜ. ವಿರೋಧಿಗಳ ಟೀಕೆ ಟಿಪ್ಪಣಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಜನರ ಪ್ರೀತಿಗೆ ಕೃತಜ್ಞತೆ ಸಲ್ಲಿಸಲು ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇನ್ನು ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ನಟ ದರ್ಶನ್, “ನಮಗೇ ಕುಡಿಯಲು ನೀರಿಲ್ಲ, ಕೊಡೋದೆಲ್ಲಿಂದ? ಒಬ್ಬರ ಊಟವನ್ನು ಹತ್ತು ಜನರಿಗೆ ಹಂಚೋಕಾಗಲ್ಲ ಎಂದು ನುಡಿದರು.

Key words: actor Darshan react to the release of Cauvery water to Tamil Nadu.

#actorDarshan #mandya #Cauverywater  #TamilNadu.