ಅಂಬಿ ಅಪ್ಪಾಜಿ ನೆನೆದ ಚಾಲೆಂಜಿಂಗ್ ಸ್ಟಾರ್ !

Promotion

ಬೆಂಗಳೂರು, ಮೇ 29, 2019 (www.justkannada.in): ಇಂದು ರೆಬಲ್ ಸ್ಟಾರ್ ಅಂಬರೀಶ್ ಜನ್ಮ ದಿನ… ಎಲ್ಲೆಡೆ ಅಭಿಮಾನಿಗಳು ಅಂಬಿ ಸ್ಮರಣೆ ಮಾಡುತ್ತಿದ್ದಾರೆ.

ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂಬಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂಬಿ ಅಪ್ಪಾಜಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ ಎಂದು ಸ್ಮರಿಸಿದ್ದಾರೆ.

ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ದರ್ಶನ್ ಟ್ವೀಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.