ನಟ ದರ್ಶನ್ ಸ್ನೇಹಿತರು ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ನನ್ನ ತೇಜೋವಧೆಗೆ ಪ್ಲಾನ್- ನಿರ್ಮಾಪಕ ಉಮಾಪತಿ ಆರೋಪ.

ಬೆಂಗಳೂರು, ಜುಲೈ,13,2021(www.justkannada.in): ನಟ ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆನಟ ದರ್ಶನ್ ಸ್ನೇಹಿತರು ಎಲ್ಲರೂ ಸೇರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ನನ್ನ ತೇಜೋವಧೆಗೆ ಪ್ಲಾನ್ ಮಾಡಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಆರೋಪಿಸಿದ್ದಾರೆ.jk

ನಟ ದರ್ಶನ್ ಹೆಸರಲ್ಲಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ನಿರ್ಮಾಪಕ ಉಮಾಪತಿ, ಅರುಣಾ ಕುಮಾರಿ ನನಗೆ ಏಪ್ರಿಲ್​ನಿಂದ ಸಂಪರ್ಕದಲ್ಲಿದ್ದರು. ಜಪ್ತಿ ಆಗಿರುವ ಪ್ರಾಪರ್ಟಿ ಖರೀದಿ ಬಗ್ಗೆ ಸಂಪರ್ಕದಲ್ಲಿದ್ದರು. ಬಳಿಕ ದರ್ಶನ್ ವಿಚಾರ ಪ್ರಸ್ತಾಪ ಮಾಡಿದರು. ಲೋನ್ ಗೆ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ..?ದರ್ಶನ್ ಏನಾದರೂ ಶ್ಯೂರಿಟಿ ಹಾಕ್ತಿದ್ದೀರಾ ಎಂದು ಕೇಳಿದ್ದರು. ಅದಕ್ಕೆ ನಾನು ಇಬ್ಬರು ಶ್ಯೂರಿಟಿ ಹಾಕಿಲ್ಲವೆಂದು ಹೇಳಿದ್ದೆ ಎಂದು ತಿಳಿಸಿದರು.

ನಾನು ಆಡಿಯೋದಲ್ಲಿ ಯಾವುದೇ ಅಶ್ಲೀಲ ಪದ ಬಳಸಿಲ್ಲ. ದರ್ಶನ್ ಸರ್ ಕೇಳಿ ನಾನು ಆಧಾರ್ ಕಾರ್ಡ್ ಕಳಿಸಿದ್ದೆ. ನಾನಾಗಲಿ, ಆಕೆಯಾಗಲಿ ಅಶ್ಲೀಲವಾಗಿ ಮಾತನಾಡಿಲ್ಲ. ನನ್ನ ಬಗ್ಗೆ ಈವರೆಗೂ ದರ್ಶನ್ ಆರೋಪ ಮಾಡಿಲ್ಲ. ಹರ್ಷಾ ವಿರುದ್ಧ ನಾನೂ ಆರೋಪ ಮಾಡಬಹುದು. ಹರ್ಷಾ ಮೈಸೂರಿನಲ್ಲಿ ದೂರು ದಾಖಲಿಸಿದ್ದರು. ನನ್ನ ನಂಬರ್ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಹರ್ಷಾ ಕೊಟ್ಟಿರುವ ದೂರಿನಲ್ಲಿರುವ ನಂಬರ್ ಪರಿಶೀಲಿಸಿದ್ದಾರಾ? ಎಂದು ನಿರ್ಮಾಪಕ ಉಮಾಪತಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಪೊಲೀಸರ ಮೇಲೆ ರಾಕೇಶ್ ಪಾಪಣ್ಣಗೆ ನಂಬಿಕೆ ಇಲ್ಲವಂತೆ. ಹಾಗಾಗಿ ಮೈಸೂರಿನಲ್ಲಿ ದೂರು ಕೊಟ್ಟಿದ್ದೇವೆ ಅಂತಾರೆ. ಆರೋಪದ ಬಗ್ಗೆ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಇಲ್ಲದಿರೋದನ್ನು ಇದೆ ಎಂದು ಸೃಷ್ಟಿಸಲು ನನಗೆ ಟೈಮ್ ಇಲ್ಲ. ಯಾರೇ ತಪ್ಪು ಮಾಡಿದ್ದರೂ ಇದು ಸಾಬೀತಾಗಲಿ ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.

ನಟ ದರ್ಶನ್​ ಸರ್​ ಕಳೆದುಕೊಳ್ಳಲು ನನಗೂ ಇಷ್ಟ ಇಲ್ಲ

ಹಾಗೆಯೇ ನಟ ದರ್ಶನ್​ ಸರ್​ ಕಳೆದುಕೊಳ್ಳಲು ನನಗೂ ಇಷ್ಟ ಇಲ್ಲ. ಹಾಗೆ ದರ್ಶನ್​ ಸರ್​ಗೆ ನನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ದರ್ಶನ್​ ಸರ್ ಪಾರ್ಟಿ ಮಾಡಿಸಿದಾಗ ಸೋಷಿಯಲ್ಸ್ ಒಳಗೆ ನನ್ನ ಕಾರು ಬಿಟ್ಟಿಲ್ಲ. ದರ್ಶನ್​ ಸರ್ ಹೇಳಿದರೂ ಕೂಡ ಒಳಗೆ ಬಿಟ್ಟಿರಲಿಲ್ಲ. ನಾನು ವಾಪಸ್ ಹೋಗುತ್ತಿರುವಾಗ ಮತ್ತೆ ಬಂದು ಕರೆದರು.ಆದರೆ ಲಾಕ್​ಡೌನ್ ವೇಳೆ ಅರುಣಾ ಕುಮಾರಿ ಬಂದಿದ್ದು ಹೇಗೆ? ಎಂದು ಉಮಾಪತಿ ಪ್ರಶ್ನಿಸಿದ್ದಾರೆ.

ಮಲ್ಲೇಶ್ ಎನ್ನುವನನ್ನು ಏಕೆ ಟ್ರೇಸ್​ ಮಾಡಿಲ್ಲ. 25 ಕೋಟಿ ರೂ. ಸಣ್ಣ ಮೊತ್ತವಲ್ಲ. ನಾನು ದಡ್ಡ, ಆದರೆ 25 ಕೋಟಿ ರೂ ವಂಚನೆ ವಿಚಾರದಲ್ಲಿ ಯಾಕೆ ಯಾಮಾರಿದರು.  ಸಿಕ್ಕಿದ್ದ ಆರೋಪಿ ಅರುಣಾ ಕುಮಾರಿಯನ್ನು ಬಿಟ್ಟಿದ್ದೇಕೆ. ವಿಚಾರಣೆ ಮುಗಿಯದೆ ಆಕೆಯನ್ನು ಬಿಟ್ಟಿದ್ದೇಕೆ. ನಾನು ಈ ಘಟನೆಯಿಂದ ಒಂದು ಬುದ್ಧಿ ಕಲಿತಿದ್ದೇನೆ. ಕೆಲಸ ಮುಗಿದ ಮೇಲೆ ಮನೆಗೆ ಬರಬೇಕೆಂದು ಬುದ್ಧಿ ಕಲಿತೆ ಎಂದು ನಿರ್ಮಾಪಕ ಉಮಾಪತಿ ಹೇಳಿದರು.

ಮಂಡ್ಯ ರಾಜಕೀಯ ನಮಗೆ ಅರ್ಥ ಆಗುತ್ತೆ. ಆದರೆ, ನಮಗೆ ಸಿನಿಮಾ ರಾಜಕೀಯ ಅರ್ಥ ಆಗುವುದಿಲ್ಲ.

ನನ್ನನ್ನು ಬಿಟ್ಟು ಸಿಸಿಬಿ ಕಚೇರಿಯಲ್ಲಿ ಏಕೆ ವಿಚಾರಣೆ ಮಾಡಿದರು. ಆಕೆಯನ್ನು ದರ್ಶನ್​ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆಗ ನನ್ನನ್ನು ಯಾಕೆ ಕರೆಯಲಿಲ್ಲ. ಯಾರೂ ಸಹ ಯಾರ ತಲೆ ತೆಗೆಯುವುದಕ್ಕೆ ಆಗುವುದಿಲ್ಲ. ನಾನು ಏನೆಂದು ಸಾಬೀತುಪಡಿಸಲು ಮಾತ್ರ ಹೋಗುತ್ತಿದ್ದೇನೆ. ನನಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಮಾಡಿ ನನ್ನ ಮೇಲೆ ಆರೋಪ ಸಾಬೀತಾದರೆ ಶಿಕ್ಷೆ ಕೊಡಿ. ಮಂಡ್ಯ ರಾಜಕೀಯ ನಮಗೆ ಅರ್ಥ ಆಗುತ್ತೆ. ಆದರೆ, ನಮಗೆ ಸಿನಿಮಾ ರಾಜಕೀಯ ಅರ್ಥ ಆಗುವುದಿಲ್ಲ. ಈ ವಿಚಾರದಲ್ಲಿ ನನಗೂ, ದರ್ಶನ್​ಗೆ ತಂದಿಡಲು ಯತ್ನಿಸಿದ್ದಾರೆ. ಅರುಣಾ ಕುಮಾರಿ ಏಕೆ ಹರ್ಷಾ ಜೊತೆ ಮಾತಾಡುತ್ತಾಳೆ ಎಂದು ಉಮಾಪತಿ ಪ್ರಶ್ನಿಸಿದರು.

Key words: Actor- Darshan- friends – target-producer- Umapati.