ದೇವರನಾಡಿನತ್ತ ದಚ್ಚು ಆ್ಯಂಡ್ ಟೀಂ ಜಾಲಿರೈಡ್ !

Promotion

ಬೆಂಗಳೂರು, ಡಿಸೆಂಬರ್,18,2020(www.justkannada.in): ಸಿನಿಮಾ ಕೆಲಸಗಳಿಗೆ ವಿರಾಮ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಲಿ ರೈಡ್ ಹೊರಟಿದ್ದಾರೆ.

ಇತ್ತೀಚಿಗಷ್ಟೆ ಮಡಿಕೇರಿ ಕಡೆ ಪಯಣ ಬೆಳೆಸಿದ್ದ ದರ್ಶನ್ ಆ್ಯಂಡ್ ಟೀಂ ಇದೀಗ ಕೇರಳ ಕಡೆ ಹೊರಟಿದೆ ಎನ್ನಲಾಗಿದೆ.

ಆರ್ ಆರ್ ನಗರದ ತಮ್ಮ ನಿವಾಸದಿಂದ ಹೊರಟ ದರ್ಶನ್ ಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ಉಮಾಪತಿ ಸೇರಿದಂತೆ ಸ್ನೇಹಿತರು ಸಾಥ್ ನೀಡಿದ್ದಾರೆ.

ದರ್ಶನ್ ಸದ್ಯ ರಾಬರ್ಟ್ ರಿಲೀಸ್ ಗೆ ಕಾದಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮುಂದಿನ ವರ್ಷ ಮುಂದಿನ ವರ್ಷ ರಿಲೀಸ್ ಆಗಲಿದೆ.