ಅಪ್ಪು ‘ಜೇಮ್ಸ್’ ಚಿತ್ರಕ್ಕೆ ನಾಸಿರುದ್ದೀನ್ ಶಾ !?

ಬೆಂಗಳೂರು, ಡಿಸೆಂಬರ್,18,2020(www.justkannada.in): ಮೂರು ದಶಕಗಳ ಬಳಿಕ ಕನ್ನಡ ಸಿನಿಮಾಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಮರಳುವ ಸಾಧ್ಯತೆ ಇದೆ.

ಹೌದು. ಪವರ್ ಸ್ಟಾರ್ ಪುನೀತ್ ನಟನೆಯ ಜೇಮ್ಸ್ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ನಾಸಿರುದ್ದೀನ್ ಶಾರನ್ನು ಕರೆತರಲು ಪ್ರಯತ್ನ ನಡೆದಿದೆ.

ಚಿತ್ರತಂಡ ಈಗಾಗಲೇ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದ್ದು, ಅವರು ಒಪ್ಪಿಗೆ ಕೊಟ್ಟರೆ ಅವರು ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ‘ಜೇಮ್ಸ್’ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.