ಡಿಕೆ, ಡಿಕೆ ಎಂದು ಘೋಷಣೆ ಕೂಗಿದ ಕಾರ್ಯಕರ್ತರು: ಭಾಷಣ ಅರ್ಧಕ್ಕೆ ನಿಲ್ಲಿಸಿ ಹೊರಟ ಸಿದ್ಧರಾಮಯ್ಯ.

ಬೆಂಗಳೂರು,ನವೆಂಬರ್,17,2021(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಭಾಷಣದ ವೇಳೆ ಕಾರ್ಯಕರ್ತರು ಡಿಕೆಶಿ ಡಿಕೆಶಿ ಎಂದು ಘೋಷಣೆ ಕೂಗಿದ್ದು ಈ ವೇಳೆ ಸಿದ್ಧರಾಮಯ್ಯ ಭಾಷಣ ಅರ್ಧಕ್ಕೆ ನಿಲ್ಲಿಸಿ ತೆರಳಿದ ಘಟನೆ ನಿನ್ನೆ ನಡೆದಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. ಸಭಾ ವೇದಿಕೆಗೆ ಆಗಮಿಸಿ  ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಕೆಲವರು ಡಿಕೆಶಿ, ಡಿಕೆಶಿ ಎಂದು ಘೋಷಣೆ ಕೂಗಿದ್ದಾರೆ.  ಅಲ್ಲದೆ ಶಾಸಕ ಜಮೀರ್ ಫೋಟೊ ಹಿಡಿದು ಬಿಝಡ್ ಎಂದು ಸಹ ಘೋಷಣೆ ಕೂಗಿದ್ದಾರೆ. ಹೀಗಾಗಿ ಸಿಟ್ಟಾದ ಸಿದ್ದರಾಮಯ್ಯ ಘೋಷಣೆ ಕೂಗುವುದನ್ನ ನಿಲ್ಲಿಸಿ ಶಾಂತರೀತಿ ಇರುವಂತೆ ಹೇಳಿದ್ದಾರೆ. ಆದರೆ ಕಾರ್ಯಕರ್ತರು ತಮ್ಮ ಚಾಳಿ ಮುಂದುವರೆಸಿದ ಹಿನ್ನೆಲೆ ಸಿದ್ಧರಾಮಯ್ಯ ಅರ್ಧಕ್ಕೆ ಭಾಷಣ ನಿಲ್ಲಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾರೆ. ಈ ನಡುವೆ ಇದು ಪೂರ್ವ ನಿಯೋಜಿತ ಪ್ಲ್ಯಾನ್ ಎಂಬ ಗುಸುಗುಸು ಕೂಡಾ ಕೇಳಿಬಂದಿದೆ.

ಬಳಿಕ ವೇದಿಕೆಗೆ ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು,  ವಿಪಕ್ಷ ನಾಯಕರು ಮಾತನಾಡಬೇಕಾದರೆ ನೀವು ಕೂಗುತ್ತೀರಿ. ಎಲ್ಲರು ಸುಮ್ಮನಿದ್ರೆ ಸರಿ.. ಇಲ್ಲಾ ಅಂದರೆ ಎಲ್ಲರನ್ನ ಆಚೆ ಹಾಕಿಬಿಡ್ತಿನಿ ಹುಷಾರ್ ನೀವು ಕಾಂಗ್ರೆಸ್ ದ್ರೋಹಿಗಳೆಂದು ಗದರಿದರು.

Key words: Activists- shouted -DK, DK-former CM-  Siddaramaiah

ENGLISH SUMMARY…

Siddaramaiah stops speech and exits as activists shout DK! DK!
Bengaluru, November 17, 2021 (www.justkannada.in): Former Chief Minister Siddaramaiah was forced to stop his speech in the middle and exit from the place as a few activists started shouting DK… DK..!
The incident occurred yesterday at the Palace grounds in Bengaluru, where a program was held to induct the Minorities Unit President. A few people started shouting DKShi, DKShi as soon as the former Chief Minister Siddaramaiah started his speech. A few of them also shouted BZ… displaying MLA Zameer Ahmed’s picture, irking Siddaramaiah who asked them to be quiet. As the activists continued their act, Siddaramaiah stopped speaking and climbed down the dais.
At this juncture, KPCC President D.K. Shivakumar expressed his displeasure about the incident and warned the activists who misbehaved.
Keywords: Siddaramaiah/ D.K. Shivakumar/ activists