Saturday, September 12, 2026

BDA Apartments

Home Front Page ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದಿದ್ದೀರಿ: ತಲೆ ಕತ್ತಿರಿಸೋದು ಗೊತ್ತು, ತಲೆ ತಗ್ಗಿಸೋದು ಗೊತ್ತಿಲ್ಲ- ‘ಕೈ’...

ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದಿದ್ದೀರಿ: ತಲೆ ಕತ್ತಿರಿಸೋದು ಗೊತ್ತು, ತಲೆ ತಗ್ಗಿಸೋದು ಗೊತ್ತಿಲ್ಲ- ‘ಕೈ’ ಮುಖಂಡನ ವಿವಾದಾತ್ಮಕ ಹೇಳಿಕೆ

ಬೆಂಗಳೂರು,ನವೆಂಬರ್,17,2021(www.justkannada.in):  ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು. ತಲೆ ಕತ್ತರಿಸೋದು ಗೊತ್ತು, ತಲೆ ತಗ್ಗಿಸೋದು ಗೊತ್ತಿಲ್ಲ. ನಿಮಗೆ ತಲೆ ಬಾಗುವುದು ತಿಳಿದಿಲ್ಲ, ತಲೆ ಎತ್ತುವುದು ತಿಳಿದಿದೆ’ ಹೀಗೆ ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ನಡೆದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಇಮ್ರಾನ್ ಪ್ರತಾಪ್ ಗಡಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಹೇಳಿಕೆ ನೀಡಿದ್ದಾರೆ. ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದಿದ್ದೀರಿ: ತಲೆ ಕತ್ತಿರಿಸೋದು ಗೊತ್ತು, ತಲೆ ತಗ್ಗಿಸೋದು ಗೊತ್ತಿಲ್ಲ. ನಿಮಗ ತಲೆ ಬಾಗುವುದು ಗೊತ್ತಿಲ್ಲ, ತಲೆ  ಎತ್ತುವುದು ಗೊತ್ತಿದೆ. ದೇಶ ಕಷ್ಟಕಾಲದಲ್ಲಿದೆ ಎಂದು ಇಮ್ರಾನ್ ಪ್ರತಾಪ್ ಗಡಿ ಹೇಳಿಕೆ ನೀಡಿದ್ದಾರೆ.

ಈ ಹಿಂದೆಯೂ ಇಮ್ರಾನ್ ಪ್ರತಾಪ್ ಗಡಿ ಸಾಕಷ್ಟು ವಿವಾದಿತ ಹೇಳಿಕೆಯನ್ನು ನೀಡಿದ್ದರು. ಶಾಹಿನ್ ಭಾಗ್ ಮಾದರಿ ಹೋರಾಟ ಹೈದರಾಬಾದ್ ನಲ್ಲಿ ಏಕಿಲ್ಲ ಎಂದು ಪ್ರಶ್ನಿಸಿ ವಿವಾದ ಹುಟ್ಟುಹಾಕಿದ್ದರು.

Key words: tippu sultan-congress-leader-imran prathap gadi-bangalore