ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಕಾರ್ಯಕರ್ತರ ಪ್ರತಿಭಟನೆ: ರೋಡ್ ಶೋ ರದ್ದುಗೊಳಿಸಿ ಹೊರಟ ಬಿಎಸ್ ವೈ.

Promotion

ಚಿಕ್ಕಮಗಳೂರು,ಮಾರ್ಚ್,16,2023(www.justkannada.in): ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ದ ಸ್ವಪಕ್ಷದ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ರೋಡ್ ಶೋವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರದ್ದು ಮಾಡಿ ಅಲ್ಲಿಂದ ತೆರಳಿದರು.

ಈ ಬಾರಿ ಎಂ.ಪಿ ಕುಮಾರಸ್ವಾಮಿ ಟಿಕೆಟ್ ಬೇಡವೇ ಬೇಡ ಹೊಸಮುಖಗಳಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇತ್ತ ಎಂಪಿ ಕುಮಾರಸ್ವಾಮಿ ಬೆಂಬಲಿಗರು ತಮ್ಮ ನಾಯಕನ ಪರ ಘೋಷಣೆ ಕೂಗಿದರು.

ಈ ನಡುವೆ ಇಂದು ಮೂಡಿಗೆರೆಯಲ್ಲಿ ವಿಜಯ ಸಂಕಲ್ಪಯಾತ್ರೆ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರಿಂದ ರೋಡ್ ಶೋ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ರೋಡ್ ಶೋ ಮತ್ತು ವಿಜಯಸಂಕಲ್ಪಯಾತ್ರೆ ರದ್ದುಗೊಳಿಸಿ ಬಿಎಸ್ ಯಡಿಯೂರಪ್ಪ ಚಿಕ್ಕಮಗಳೂರಿಗೆ ತೆರಳಿದರು.

Key words: Activists’- protest -against – MLA -MP Kumaraswamy-BSY -canceled – road show