ನಾರಾಯಣ್ ಗೌಡ ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ- ಸಚಿವ ಅಶ್ವಥ್ ನಾರಾಯಣ್.

ಮಂಡ್ಯ,ಮಾರ್ಚ್,16,2023(www.justkannada.in): ಸಚಿವ ನಾರಾಯಣಗೌಡರು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಕೆ.ಆರ್​.ಪೇಟೆಯಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಕಾಂಗ್ರೆಸ್​ ನಾಯಕರಿಗೆ ಜನ 5 ರೂಪಾಯಿ ಕಿಮ್ಮತ್ತೂ ಕೊಡುವುದಿಲ್ಲ. ಕಾಂಗ್ರೆಸ್​​ ಅನ್ನು ಸಿಡಿ ಪಾರ್ಟಿ ಅಂತಾನೇ ಕರೆಯುತ್ತಾರೆ.​ ಸಿಡಿ ಬ್ಲ್ಯಾಕ್​ಮೇಲ್ ಎಲ್ಲವೂ ವರ್ಕೌಟ್ ಆಗಲ್ಲ ಎಂದು  ಲೇವಡಿ ಮಾಡಿದರು.

ಬಿಜೆಪಿಗೆ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ್,  ಸುಮಲತಾ ಅವರ ಬೆಂಬಲದಿಂದ  ನಮ್ಮ ಪಕ್ಷಕ್ಕೆ ಅನುಕೂಲ ಮತ್ತು ಬಲ ಸಿಕ್ಕಂತಾಗಿದೆ ಎಂದರು.

ಉರಿಗೌಡ, ನಂಜೇಗೌಡ ನಮ್ಮ ಅಭಿಮಾನದ ಸಂಕೇತ. ಟಿಪ್ಪುನಂತಹ ಹಂತಕ, ಮತಾಂಧನಿಂದ ನಮ್ಮ ಮೈಸೂರು ಸಂಸ್ಥಾನವನ್ನ ರಕ್ಷಣೆ ಮಾಡಿದ್ದು ನಮ್ಮ ಹೆಮ್ಮೆ. ರಾಣಿ ಲಕ್ಷ್ಮೀ ಅಮ್ಮಣ್ಣಿಯ ರಕ್ಷಣೆ ದಳದಲ್ಲಿದ್ದವರು. ಚುನಾವಣಾ ಸಂದರ್ಭದಲ್ಲಿ ಮತವನ್ನ ಲೆಕ್ಕಕ್ಕೆ ತೆಗೆದುಕೊಂಡು ಈ ರೀತಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು  ಅಶ್ವತ್ ನಾರಾಯಣ್ ವಾಗ್ದಾಳಿ ನಡೆಸಿದರು.

 

Key words: Narayan Gowda – no -going – another party – Minister -Aswath Narayan.