ರಿಂಗ್ ರಸ್ತೆ ಇಕ್ಕೆಲಗಳಲ್ಲಿ ಅಕ್ರಮ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕ್ರಮ- ಮುಡಾ ಆಧ್ಯಕ್ಷ ಎಚ್ ವಿ ರಾಜೀವ್ ಎಚ್ಚರಿಕೆ..

ಮೈಸೂರು,ನವೆಂಬರ್,21,2020(www.justkannada.in): ಮೈಸೂರು ರಿಂಗ್ ರಸ್ತೆ  ಇಕ್ಕೆಲಗಳಲ್ಲಿ ಅಕ್ರಮ ತ್ಯಾಜ್ಯ ವಿಲೇವಾರಿ  ಮಾಡಲಾಗುತ್ತಿದ್ದು ಇದು ಗಮನಕ್ಕೆ ಬಂದಿದೆ. ಹೀಗೆ ಅಕ್ರಮ ತ್ಯಾಜ್ಯ ವಿಲೇವಾರಿ  ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ಎಚ್ಚರಿಕೆ ನೀಡಿದರು.kannada-journalist-media-fourth-estate-under-loss

ಮುಡಾ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೂಡಾ ಆಧ್ಯಕ್ಷ ಎಚ್ ವಿ ರಾಜೀವ್ ,  ರಿಂಗ್ ರಸ್ತೆಯ ಬದಿಗಳಲ್ಲಿ ತಾಜ್ಯ ತಪ್ಪಿಸಲು ಜಾಗೃತದಳ ರಚನೆ ಮಾಡಲಾಗಿದೆ. ರಿಂಗ್ ರಸ್ತೆಯ ಬದಿಗಳಲ್ಲಿ ಕಟ್ಟಡ ತ್ಯಾಜ್ಯ ಹೊರ ಹಾಕುವುದು ಗಮನಕ್ಕೆ ಬಂದಿದೆ. ಎಲ್ಲಾ ರೀತಿಯ ತ್ಯಾಜ್ಯಗಳು  ಅಲ್ಲಿ ಕಂಡು ಬರುತ್ತಿದೆ. ಮೈಸೂರಿನ  ರಿಂಗ್ ರಸ್ತೆಯ ಸ್ವಚ್ಛತೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಈ ಕುರಿತು ಮೊದಲ ಹೆಜ್ಜೆ ಇಟ್ಟಿದ್ದೇವೆ. ಅಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಅಕ್ರಮ ತ್ಯಾಜ್ಯ ವಿಲೇವಾರಿ ಕಂಡುಬಂದಲ್ಲಿ ಛಾಯಾಚಿತ್ರ ತೆಗೆದು ಕಳುಹಿಸಿ…

ಒಟ್ಟು 30 ವಿವಿಧ ಸ್ಥಳಗಳಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಅದರಲ್ಲಿ 13 ಸ್ಥಳಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ತ್ಯಾಜ್ಯ ಸಮಸ್ಯೆಗಳಿಂದ ಮೈಸೂರು ಸೌಂದರ್ಯ ಹಾಳಾಗುತ್ತಿದೆ. ಈ ಹಿನ್ನಲೆಯಲ್ಲಿ  ಕಟ್ಟಡ ತ್ಯಾಜ್ಯ, ಡೇಬ್ರಿಸ್ ಹಾಗೂ ಇತ್ಯಾದಿಗಳನ್ನು ತೆರವುಗೊಳಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಸಾರ್ವಜನಿಕರೂ ಕೂಡ ಮೂಡಾ ಜೊತೆ ಕೈಜೋಡಿಸಿ. ಅಕ್ರಮ ತ್ಯಾಜ್ಯ ವಿಲೇಮಾರಿ ಮಾಡುವುದು ಕಂಡುಬಂದಲ್ಲಿ ಛಾಯಾ ಚಿತ್ರ ತೆಗೆದು 8884000750 ಸಂಖ್ಯೆಗೆ ಕಳುಹಿಸಿ. ಅಂತವರ ಬಗ್ಗೆ ಕಾನೂನು ಕ್ರಮವಹಿಸಲಾಗುತ್ತದೆ. ಅಲ್ಲದೆ ಅವರ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಮೂಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.action-against-illegal-waste-disposal-mysore-ring-road-muda-president-hv-rajiv-warns

ಮುಂದಿನ ದಿನಗಳಲ್ಲಿ ಪ್ರಾಧಿಕಾರವು ರಚಿಸುವ ಜಾಗೃತದಳವು ಈ ಬಗ್ಗೆ ಪರಿಣಾಮವಾಗಿ ಕಾರ್ಯ ನಿರ್ವಹಿಸುತ್ತದೆ. ಪಾಲಿಕೆ ಜೊತೆ ಚರ್ಚೆ ಮಾಡಿ ತ್ಯಾಜ್ಯ ವಿಲೇವಾರಿ ಬಗ್ಗೆ ಕ್ರಮವಹಿಸಲಾಗುವುದು ಎಂದು ಮುಡಾ ಅಧ್ಯಕ್ಷ ರಾಜೀವ್ ತಿಳಿಸಿದರು.

English summary…

MUDA warns action against people who dispose garbage on either sides of ring road
Mysuru, Nov. 21, 2020 (www.justkannada.in): Addressing media men at the MUDA auditorium today, MUDA President H.V. Rajeev informed that action will be taken against those who throw garbage on the either sides of the ring road. He said that mounds of building waste has been found dumped at many places on either sides of the rind road and said a taskforce has been formed to create awareness among the people in this regard.action-against-illegal-waste-disposal-mysore-ring-road-muda-president-hv-rajiv-warns
He has urged the public to take pictures and send it to 8884000750 in case if they find disposal of waste on roadside and warned of strict against on the violators.
Keywords: MUDA-Ring road-waste-garbage-action

Key words: Action –Against- Illegal -Waste -Disposal –mysore-Ring Road-Muda president- HV Rajiv- warns.