Act 1978 ಬಿಗ್ ಬಜೆಟ್’ನಲ್ಲಿ ಬಾಲಿವುಡ್’ಗೆ ರಿಮೇಕ್

ಬೆಂಗಳೂರು, ಏಪ್ರಿಲ್ 10, 2021 (www.justkannada.in): ಲಾಕ್ ಡೌನ್ ಬಳಿಕ ಬಿಡುಗಡೆಯಾಗಿ ಗಮನ ಸೆಳೆದ ಕನ್ನಡದ ಮೊದಲ ಚಿತ್ರ Act 1978 ಚಿತ್ರ ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ.

ನಿರ್ದೇಶಕ ಮಂಸೋರೆ ಅವರ ಬತ್ತಳಿಕೆಯಿಂದ ಬಂದ ಈ ಸಿನಿಮಾದಲ್ಲಿ ಯಜ್ಞಾ ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದರು. ಚಿತ್ರ ಹಾಗೂ ಯಜ್ಞಾ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ದೊಡ್ಡ ಬಜೆಟ್​ನಲ್ಲಿಯೇ ಈ ಚಿತ್ರ ನಿರ್ಮಾಣ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯೇ ಶೀಘ್ರದಲ್ಲಿ ಮಾಹಿತಿ ಹಂಚಿಕೊಳ್ಳಲಿದೆ.

ಥಿಯೇಟರ್ ಬಳಿಕ ಅಮೆಜಾನ್ ಪ್ರೈಂನಲ್ಲೂ ಬಿಡುಗಡೆಯಾಗಿ ಚಿತ್ರ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.