ಅನ್ನಭಾಗ್ಯ ನಿಮ್ಮ  ಒಬ್ಬರ ಸಾಧನೆ ಅಲ್ಲ: ನಮಗೆ ಮಾರ್ಕ್ಸ್ ಕೊಡೋದು ನೀವಲ್ಲ. – ಸಿದ್ಧರಾಮಯ್ಯಗೆ ಟಾಂಗ್ ಕೊಟ್ಟ ಸಿಎಂ ಬಿಎಸ್ ಯಡಿಯೂರಪ್ಪ…

Promotion

ಬೆಂಗಳೂರು,ನ,1,2019(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆ ಶೂನ್ಯ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ನಮಗೆ ಮಾರ್ಕ್ಸ್ ಕೊಡೋರು ನೀವಲ್ಲ ರಾಜ್ಯದ ಜನರು ಎಂದು ಟಾಂಗ್ ನೀಡಿದರು.

ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಇವರ ಸಾಧನೆ ಲೋಕಸಭೆಯಲ್ಲಿ ಗೊತ್ತಾಗಿದೆ. ಮುಂದೆ ಬೈ ಎಲೆಕ್ಷನ್ ಬರುತ್ತಿದೆ. ಸವಾಲು ಸ್ವೀಕರಿಸುವೆ. ಸಿದ್ಧರಾಮಯ್ಯ ಅವಧಿಯಲ್ಲಿನ ಸಾಧನೆಯ ಪಟ್ಟಿಯನ್ನ ನೀಡಲಿ. ನಾನು ಸಿಎಂ ಆಗಿದಾಗಿನಿಂದ ಮಾಡಿರುವ ಸಾಧನೆಯ ಪಟ್ಟಿಯನ್ನ ಕೊಡುತ್ತೇನೆ. ನೋಡೋಣ ಎಂದು ತಿಳಿಸಿದರು.

ಟೀಕೆ ಮಾಡುವವರು ಟೀಕೆ ಮಾಡುತ್ತಲೇ ಇರುತ್ತಾರೆ. ಟೀಕೆ ಮಾಡುವುದರಿಂದ ಏನು ಸಾಧನೆ ಮಾಡುತ್ತಾರೋ ಗೊತ್ತಿಲ್ಲ. ಅನ್ನಭಾಗ್ಯ ನಿಮ್ಮ  ಒಬ್ಬರ ಸಾಧನೆ ಅಲ್ಲ. ಕೇಂದ್ರದ ಕೊಡುಗೆ ಎಂದು ಸಿದ್ಧರಾಮಯ್ಯ ವಿರುದ್ದ ಸಿಎಂ ಬಿಎಸ್ ಯಡಿಯೂರಪ್ಪ ಹರಿಹಾಯ್ದರು.

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ನೆರೆ ಬಂದಿದೆ. 20 ದಿನಗಳ ಕಾಲ ನಾವು ಅಲ್ಲೇ ಇದ್ದು ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿದ್ದೇವೆ. ನಿನ್ನೆವರೆಗೂ ಮನೆ ನಿರ್ಮಾಣಕ್ಕೆ ತಲಾ 1 ಲಕ್ಷ ನೀಡಿದ್ದೇವೆ. ರೈತರ ಕಷ್ಟಕ್ಕೆ ನಮ್ಮ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: achievement. not -giving – marks- CM BS Yeddyurappa – Siddaramaiah