ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪ: ಸಬ್ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ವಿರುದ್ದ ದೂರು ದಾಖಲು..

Promotion

ಮೈಸೂರು,ಜೂ,5,2019(www.justkannada.in): ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಟಿ.ನರಸೀಪುರ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್  ವಿರುದ್ದ ದೂರು ದಾಖಲಾಗಿದೆ.

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಯಾಸ್ಮಿನ್ ತಾಜ್ ವಿರುದ್ದ ದೂರು ದಾಖಲಾಗಿದೆ. ಮೈಸೂರಿನ ಹೆಬ್ಬಾಳ್ ನಿವಾಸಿ ಪರಮೇಶ್ ಎಂಬುವರಿಂದ ದೂರು ನೀಡಿದ್ದಾರೆ. ಮೈಸೂರಿನ ಗಾಯತ್ರಿ ಪುರಂ ನಲ್ಲಿ ನಿನ್ನೆ ರಾತ್ರಿ  ಯಾಸ್ಮಿನ್ ತಾಜ್ ರವರ ಅಪ್ರಾಪ್ತ ಮಗ ಓಡಿಸುತ್ತಿದ್ದ ದ್ವಿಚಕ್ರ ವಾಹನ ಪರಮೇಶ್ ರವರ ವಾಹನಕ್ಕೆ ಡಿಕ್ಕಿಯಾಗಿತ್ತು.

ಬೈಕ್ ಹಿಂದೆ ಕುಳಿತಿದ್ದ ಯಾಸ್ಮಿನ್ ತಾಜ್ ಪರಮೇಶ್ ಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಪರಮೇಶ್ ಮರ್ಮಾಂಗಕ್ಕೆ ಗುದ್ದಿ, ಪೊಲೀಸ್ ಅಧಿಕಾರಿಗಳು ಗೊತ್ತು ಸಿದ್ದರಾಮಯ್ಯ ಗೊತ್ತು ಎಂದು ಪರಮೇಶ್ ಗೆ ಧಮ್ಕಿ  ಹಾಕಿದ್ದಾರೆಂದು ಪರಮೇಶ್  ದೂರಿನಲ್ಲಿ ತಿಳಿಸಿದ್ದಾರೆ. ಜತೆಗೆ ಈ ಬಗ್ಗೆ ಸಿದ್ದಾರ್ಥ ಟ್ರಾಫಿಕ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಯಾಸ್ಮಿನ್ ತಾಜ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು  ಪರಮೇಶ್ ಅವರು ಆರೋಪಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Key words: accused of assaulting and threatening murder: filed a complaint against Sub Inspector  Yasmin Taj.

#Crimenews #mysore #complaint #SubInspector  #YasminTaj