ನಟ ಸಲ್ಮಾನ್ ಖಾನ್’ ಚೇತರಿಕೆ : ಆಸ್ಪತ್ರೆಯಿಂದ ಡಿಸ್ವಾರ್ಜ್

Promotion

ಬೆಂಗಳೂರು, ಡಿಸೆಂಬರ್ 27, 2021 (www.justkannada.in): ಫಾರ್ಮ್‌ಹೌಸ್‌ನಲ್ಲಿದ್ದಾಗ ನಟ ಸಲ್ಮಾನ್ ಖಾನ್ ಅವ್ರಿಗೆ ಹಾವು ಕಚ್ಚಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವ್ರ ಆರೋಗ್ಯ ಸ್ಥಿತಿ ಈಗ ಚೆನ್ನಾಗಿದ್ದು, ವಿಷಕಾರಿಯಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಘಟನೆ ನಡೆದಾಗ ಸಲ್ಮಾನ್ ಖಾನ್ ತಮ್ಮ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿದ್ದರು. ಕ್ರಿಸ್‌ಮಸ್ ಆಚರಣೆಗಾಗಿ ಕುಟುಂಬ ಸಮೇತ ಅಲ್ಲಿಗೆ ತೆರಳಿದ್ದರು.

ಮಾಧ್ಯಮಗಳಿಗೆ ಬೆಳಗ್ಗೆ ಮಾಹಿತಿ ಸಿಕ್ಕಿದೆ. ಸಧ್ಯ ಸಲ್ಮಾನ್ ಖಾನ್ ಸಂಪೂರ್ಣವಾಗಿ ಅಪಾಯದಿಂದ ಪಾರಾಗಿದ್ದು, ಇದೀಗ ಮತ್ತೆ ಪನ್ವೆಲ್ ಫಾರ್ಮ್‌ಹೌಸ್‌ಗೆ ಆಗಮಿಸಿ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.