ಮರುಮೌಲ್ಯಮಾಪನದ ನಂತರ ಕೇವಲ 40 ಅಂಕಗಳನ್ನು ಪಡೆದಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗೆ 99 ಅಂಕ!

Promotion

ಬೆಂಗಳೂರು, ಆಗಸ್ಟ್ ೫, ೨೦೨೨ (www.justkannada.in): ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಮರುಮೌಲ್ಯಮಾನದಲ್ಲಿ ೫೦೦ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ತಾವು ಪಡೆದಿರುವುದಕ್ಕಿಂತ ಬಹಳ ಹೆಚ್ಚಿನ ಅಂಕಗಳು ಬಂದ ಹಿನ್ನೆಲೆಯಲ್ಲಿ ಹಲವು ಶಿಕ್ಷಕರು ಎಸಗಿರುವ ತಪ್ಪು ಮೌಲ್ಯಮಾಪನ ಬಹಿರಂಗಗೊಂಡಿದೆ.

ಒಂದು ಪ್ರಕರಣದಲ್ಲಿ, ಓರ್ವ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ ಕೇವಲ ೪೦ ಅಂಕಗಳು ಬಂದಿತ್ತು. ಆದರೆ ಮರುಮೌಲ್ಯಮಾಪನದ ನಂತರ ೯೯ ಅಂಕಗಳು ಬಂದಿವೆ. ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಲಭ್ಯವಾಗಿರುವ ದತ್ತಾಂಶದ ಪ್ರಕಾರ ಇದು ಈ ವರ್ಷ ದಾಖಲಾಗಿರುವ ಅತೀ ಹೆಚ್ಚಿನ ವ್ಯತ್ಯಾಸದ ಅಂಕಗವಾಗಿದೆ.

ಈ ವರ್ಷ ಒಟ್ಟು ೧೩,೮೪೮ ವಿದ್ಯಾರ್ಥಿಗಳೂ ಮರುಮೌಲ್ಯಮಾನಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ೫೩೨ ವಿದ್ಯಾರ್ಥಿಗಳಿಗೆ ೧೦ಕ್ಕಿಂತ ಹೆಚ್ಚಿನ ಅಂಕಗಳು ಹೆಚ್ಚಾಗಿ ಬಂದಿವೆ. ಕಳೆದ ಎರಡು ವರ್ಷಗಳ ಹೋಲಿಕೆಯಲ್ಲಿ ಈ ವರ್ಷದ ಮರುಮೌಲ್ಯಮಾಪನದಲ್ಲಿ ಕಂಡು ಬಂದಿರುವ ಅಂಕಗಳ ವ್ಯತ್ಯಾಸ ಹೆಚ್ಚಾಗಿದೆ. ೨೦೨೦ರಲ್ಲಿ ಅತೀ ಹೆಚ್ಚಿನ ಅಂಕ ವ್ಯತ್ಯಾಸ ೩೫ ಆಗಿತ್ತು. ೨೦೨೧ರಲ್ಲಿ ೨೧ ಆಗಿತ್ತು. ಆದರೆ ಈ ವರ್ಷ ಈ ವ್ಯತ್ಯಾಸ ೫೯ ಅಂಕಗಳಿಗೆ ಏರಿಕೆಯಾಗಿದೆ.

ಮೌಲ್ಯಮಾಪಕರ ಈ ಪ್ರಮಾಣದ ನಿರ್ಲಕ್ಷ್ಯವನ್ನು ಪರಿಗಣಿಸಿ ಇಲಾಖೆಯು ಅಂತಹ ಮೌಲ್ಯಮಾಪಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಲೋಚಿಸಿದೆ. ಇಲಾಖೆಯ ಮೂಲಗಳ ಪ್ರಕಾರ ಇಂತಹ ತಪ್ಪನ್ನು ಎಸಗಿರುವ ಮೌಲ್ಯಮಾಪಕರ ವಿರುದ್ಧ ಕೇವಲ ದಂಡ ವಿಧಿಸಿದರೇ ಏನೂ ಪ್ರಯೋಜನವಾಗುವುದಿಲ್ಲ.

“ಈ ವಿಷಯವನ್ನು ವಿಧಾನಸಭೆಯಲ್ಲೂ ಚರ್ಚಿಸಲಾಗಿದ್ದು, ತಪ್ಪು ಮೌಲ್ಯಮಾಪನಕ್ಕೆ ಕಾರಣವಾಗಿರುವಂತಹ ಮೌಲ್ಯಮಾಪಕರನ್ನು ಬ್ಲ್ಯಾಕ್‌ ಲಿಸ್ಟ್ ಗೆ ಸೇರಿಸಬೇಕೆಂಬ ಬೇಡಿಕೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಶೀಘ್ರದಲ್ಲೇ ನಿಯಮಗಳ ಪ್ರಕಾರ ಒಂದು ನಿರ್ಧಾರವನ್ನು ಕೈಗೊಳ್ಳಲಿದ್ದು, ಅಂತಹ ಮೌಲ್ಯಮಾಪಕರ ವಿರುದ್ಧ ಸ್ಪಷ್ಟನೆ ಕೇಳಿ ಒಂದು ನೋಟಿಸ್ ಅನ್ನು ನೀಡುತ್ತೇವೆ,” ಎಂದು ಆ ಅಧಿಕಾರಿ ತಿಳಿಸಿದರು.

“ಕೆಲವು ಉತ್ತರಪತ್ರಿಕೆಗಳನ್ನು ಮೌಲ್ಯಮಾಪನವೇ ಮಾಡಿಲ್ಲ, ಇನ್ನೂ ಕೆಲವು ಉತ್ತರಪತ್ರಿಕೆಗಳಲ್ಲಿ ಅಂಕಗಳನ್ನು ಕೂಡುವುದಲ್ಲಿ ತಪ್ಪುಗಳಾಗಿದ್ದರೆ ಇನ್ನೂ ಕೆಲವು ಉತ್ತರಪತ್ರಿಕೆಗಳಲ್ಲಿ ಅಂಕಗಳನ್ನು ಗುರುತಿಸುವಲ್ಲಿ ತಪ್ಪುಗಳಾಗಿವೆ,” ಎಂದು ಆ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ಇಲಾಖೆಯು ಕೋವಿಡ್ ಸಾಂಕ್ರಾಮಿಕ ಇದ್ದ ಕಾರಣದಿಂದಾಗಿ ತಪ್ಪು ಮೌಲ್ಯಮಾಪನ ಮಾಡಿದಂತಹ ಮೌಲ್ಯಮಾಪಕರ ವಿರುದ್ಧ ಯಾವುದೇ ಶಿಕ್ಷೆಯನ್ನು ವಿಧಿಸಲಿಲ್ಲ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಂತಹ ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಗಳಿಸಿದರು. ಅಂತಹ ಪ್ರಕರಣಗಳಲ್ಲಿ ವ್ಯತ್ಯಾಸದ ಅಂಕಗಳು ೮ ರಿಂದ ೧೧ರಷ್ಟಿದೆ. “ಕೆಲವು ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪೋಷಕರ ಒತ್ತಡಕ್ಕೆ ಮಣಿದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಹಾಗೂ ನಮ್ಮ ನಿಯಮಗಳ ಪ್ರಕಾರ ಅವರಿಗೆ ನಕಾರಾತ್ಮಕ ಅಂಕಗಳು ಬಂದಿವೆ. ದುರಾದೃಷ್ಟಕರವಾಗಿ ನಾವು ಅದನ್ನೇ ಅಂತಿಮ ಅಂಕಗಳಿಕೆ ಎಂದು ಪರಿಗಣಿಸಬೇಕಾಗಿದೆ. ಈ ವರ್ಷ ೪೭೯ ವಿದ್ಯಾರ್ಥಿಗಳು ಅದೇ ರೀತಿ ಮೂಲ ಅಂಕಗಳಿಗಿಂತ ಮರುಮೌಲ್ಯಮಾಪನದ ನಂತರ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ,” ಎಂದು ಅಧಿಕಾರಿ ತಿಳಿಸಿದ್ದಾರೆ.

ಶೇ.೬ರಷ್ಟು ಅಂಕಗಳ ವ್ಯತ್ಯಾಸವಿರುವ (ಹೆಚ್ಚು) ವಿದ್ಯಾರ್ಥಿಳಿಗೆ ಇಲಾಖೆ ಮರುಮೌಲ್ಯಮಾಪನದ ಶುಲ್ಕವನ್ನು ಹಿಂದಿರುಗಿಸುತ್ತದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: 99 marks – second PU -student – only -40 marks –after- revaluation