ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಬೆಂಗಳೂರು, ಆಗಸ್ಟ್ 05, 2022 (www.justkannada.in): ರಾಜ್ಯದ ಹಲವು ಜಿಲ್ಲೆಗಳಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಲವು ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಮಹಾಲಕ್ಷ್ಮಿ ಮಂದಿರ ವೃತ್ತದ ಲಕ್ಷ್ಮೀ ದೇವಿಗೆ ವಿಶೇಷ ಅಭಿಷೇಕ ಮಾಡಲಾಗಿದೆ.

ಮುಜರಾಯಿ ಇಲಾಖೆಯ ಎಲ್ಲಾ ದೇವಸ್ಥಾನಗಳಲ್ಲಿ ಮುತ್ತೈದೆಯರಿಗೆ ಅರಿಶಿನ-ಕುಂಕುಮ ನೀಡೋ ವ್ಯವಸ್ಥೆ ಮಾಡಿದೆ. ಭಕ್ತರು ದೇವಸ್ಥಾನಗಳಿಗೆ ಆಗಮಿಸುತ್ತಿದ್ದಾರೆ.

ಶ್ರೀಮದ್ ಭಗವತ್ ಪುರಾಣದಲ್ಲಿ ಆದಿ ಲಕ್ಷ್ಮಿಯನ್ನು ಲಕ್ಷ್ಮಿ ದೇವಿಯ ಮೊದಲ ರೂಪವೆಂದು ಪರಿಗಣಿಸಲಾಗಿದೆ. ಆಕೆಯನ್ನು ಮೂಲ ಲಕ್ಷ್ಮಿ ಅಥವಾ ಮಹಾಲಕ್ಷ್ಮಿ ಎಂದೂ ಕರೆಯುತ್ತಾರೆ. ತಾಯಿ ಆದಿ ಲಕ್ಷ್ಮಿ ಜಗತ್ತನ್ನು ಸೃಷ್ಟಿ ಕರ್ತೆ. ಶ್ರೀ ಹರಿಯೊಂದಿಗೆ ಜಗತ್ತನ್ನು ನಡೆಸುತ್ತಾಳೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಧಾರ್ಮಿಕ ಗ್ರಂಥಗಳಲ್ಲಿ, ಲಕ್ಷ್ಮಿ ದೇವಿಯ ಎರಡನೇ ರೂಪವನ್ನು ಧನ ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಒಂದು ಕೈಯಲ್ಲಿ ಬಂಗಾರದ ಕಲಶವನ್ನು ಹಿಡಿದು, ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಧನ ಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಯ ಆರ್ಥಿಕ ಸಮಸ್ಯೆಗಳು ದೂರವಾಗುವುದಲ್ಲದೆ ಸಾಲದಿಂದ ಮುಕ್ತಿ ದೊರೆಯುತ್ತದೆ.