ಊಟದ ನಂತರ ಮಜ್ಜಿಗೆ ಕುಡಿದು ಒಂದೇ ಕುಟುಂಬದ 8 ಮಂದಿ ಅಸ್ವಸ್ಥ: ಕೆ.ಆರ್ ಆಸ್ಪತ್ರೆಗೆ ದಾಖಲು

Promotion

ಚಾಮರಾಜನಗರ,ಮೇ,3,2019(www.justkannada.in):  ಊಟದ ನಂತರ ಮಜ್ಜಿಗೆ ಸೇವಿಸಿ ಒಂದೇ ಕುಟುಂಬದ 8 ಮಂದಿ ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ  ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಬಸವಾಪುರದಲ್ಲಿ ಈ ಘಟನೆ ನಡೆದಿದೆ. ಮಹದೇವಶೆಟ್ಟಿ(50),ನಾಗಶೆಟ್ಟಿ,(40) ಬೆಳ್ಳಮ್ಮ,(50)ಅಖಿಲ್,(6)ಸುಭಾಷ್ (6)ಕಿಶೊರ್(5)ನಾಗಸುಂದರಿ(28) ಸೇರಿದಂತೆ 8 ಮಂದಿ ಅಸ್ವಸ್ಥಗೊಂಡವರು. ಹೆಚ್ಚಿನ ಚಿಕಿತ್ಸೆಗಾಗಿ  ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಗ್ರಾಮದ ಮಹದೇವಶೆಟ್ಟಿ ಎಂಬವರ ಜಮೀನಿನಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದು ಮಧ್ಯಾಹ್ನ ಊಟದ  ನಂತರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಮಂದಿ ಸಂಜೆ ವೇಳೆಗೆ ಅಸ್ವಸ್ಥರಾಗಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ, ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 8 people -single family –drunk- sick- admitted – KR  hospital