ಡಾ.ರಾಜ್’ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಪಾಸ್

ಬೆಂಗಳೂರು, ಮೇ 31, 2022 (www.justkannada.in): ಕೇಂದ್ರ ಲೋಕಸೇವಾ ಆಯೋಗ (UPSC) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ಪರೀಕ್ಷೆಯಲ್ಲಿ ಡಾ.ರಾಜ್​ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ 8 ಮಂದಿ ಕೂಡ ಸೇರಿಕೊಂಡಿದ್ದಾರೆ.

ಡಾ.ರಾಜ್​ಕುಮಾರ್ ಅಕಾಡೆಮಿಯಿಂದ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಅಕಾಡೆಮಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದೆ.

ಇದೇ ಈ ಬಾರಿ ಕೂಡ ಹಲವು ಮಂದಿ ಈ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಡಾ.ರಾಜ್​ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿಯಿಂದ 8 ಮಂದಿ ತೇರ್ಗಡೆಯಾಗಿದ್ದಾರೆ.

ಬೇನಕ ಪ್ರಸಾದ್ 92ನೇ Rank, ಮೇಘನಾ ಕೆ ಟಿ 425, ರಾಜೇಶ್ ಪೊನ್ನಪ್ಪ 222, ಪ್ರೀತಿ ಪಂಚಾಲ್ 449, ಪ್ರಶಾಂತ್ ಕುಮಾರ್ ಬಿಓ 641, ರವಿನಂದನ್ ಬಿಎಂ 455, ನಿಖಿಲ್ ಬಿ ಪಾಟೀಲ್ 139ನೇ, ದೀಪಕ್ ಆರ್ ಸೇಟ್ 311ನೇ Rank ಗಳಿಸಿದ್ದಾರೆ.