ಈ ಶುಕ್ರವಾರ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಸುಗ್ಗಿ !

Promotion

ಬೆಂಗಳೂರು, ನವೆಂಬರ್ 21, 2019 (www.justkannada.in): ಈ ಶುಕ್ರವಾರ (ನ.22) ಅಂದರೆ ನಾಳೆ ಕನ್ನಡದ 7 ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾಗಿರುವ ಕಾರಣ ಈ ವಾರ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದೆ. ಹರಿಪ್ರಿಯಾ ನಟನೆಯ ‘ಕನ್ನಡ್ ಗೊತ್ತಿಲ್ಲ’, ನವರಸ ನಾಯಕ ಜಗ್ಗೇಶ್ ಅಭಿನಯದ ‘ಕಾಳಿದಾಸ ಕನ್ನಡ ಮೇಷ್ಟ್ರು’, ‘ಮನರೂಪ’, ‘ಮರನಮ್’, ‘ರಾಜಲಕ್ಷ್ಮಿ’, ‘ನ್ಯೂರಾನ್’ ಹಾಗೂ ‘ಅಲೆಕ್ಸ್’ ಎಂಬ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ.

‘ಕಾಳಿದಾಸ ಕನ್ನಡ ಮೇಷ್ಟ್ರು’ ಕವಿರಾಜ್ ನಿರ್ದೇಶನದ ಸಿನಿಮಾ. ಕನ್ನಡ ಭಾಷೆಯ ಬಗ್ಗೆ ಸಿನಿಮಾ ಕಥೆ ಇದೆ. ಚಿತ್ರದಲ್ಲಿ ನಾಯಕ ಜಗ್ಗೇಶ್ ಕನ್ನಡ ಮೇಷ್ಟ್ರು ಪಾತ್ರ ಮಾಡಿದ್ದಾರೆ.  ‘ಕನ್ನಡ್ ಗೊತ್ತಿಲ್ಲ’ ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದ ಸಿನಿಮಾ. ಆರ್ ಜೆ ಮಯೂರ್ ರಾಘವೇಂದ್ರ ಈ ಸಿನಿಮಾದ ನಿರ್ದೇಶಕ. ಹರಿಪ್ರಿಯಾ ಚಿತ್ರದ ನಾಯಕಿ.