ಹನಿ ಟ್ರ್ಯಾಪ್‌ ಬಲೆಗೆ ಬಿದ್ದು ಫಿಕ್ಸಿಂಗ್’ಗೆ ಒಪ್ಪಿಕೊಂಡಿದ್ದ ಕೆಪಿಎಲ್ ಆಟಗಾರರು

ಬೆಂಗಳೂರು, ನವೆಂಬರ್ 21, 2019 (www.justkannada.in): ಕೆಪಿಎಲ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಕೆಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಬಲೆಯಲ್ಲಿ ಕೆಡವಲು ಹನಿಟ್ರ್ಯಾಪ್, ವಿದೇಶ ಪ್ರವಾಸ ಮತ್ತು ಭಾರೀ ಹಣ ನೀಡಿವ ಆಮೀಷ ಒಡ್ಡಲಾಗಿದೆ.

ಇತ್ತೀಚೆಗಷ್ಟೆ ಫಿಕ್ಸಿಂಗ್ ನಡೆಸಿದ ಆರೋಪದಡಿ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಶ್ವಾಕ್ ತಾರ್​ನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಟ್ರ್ಯಾಪ್‌ ಮೂಲಕ ಕೆಲವು ಆಟಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.