ಲೈವ್‌ಬ್ಯಾಂಡ್‌ ಮೇಲೆ ದಾಳಿ: 66 ಯುವತಿಯರ ರಕ್ಷಣೆ

Promotion

ಬೆಂಗಳೂರು:ಆ-17;(www.justkannada.in) ಮೆಜೆಸ್ಟಿಕ್‌ ಸಮೀಪದ ಸುಬ್ಬೇದಾರ್‌ ಛತ್ರಂ ರಸ್ತೆಯ ಬ್ಲೂ ಹೆವನ್‌ ಲೈವ್‌ಬ್ಯಾಂಡ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 66 ಯುವತಿಯರನ್ನು ರಕ್ಷಿಸಿದ್ದಾರೆ.

ದಾಳಿ ವೇಳೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ 18 ಆರೋಪಿಗಳನ್ನು ಬಂಧಿಸಲಾಗಿದೆ. 46 ಜನ ಗ್ರಾಹಕರನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ 65,770 ರೂ. ನಗದು, ಮ್ಯೂಸಿಕ್‌ ಸಿಸ್ಟಂ, ಸ್ವೈಪಿಂಗ್‌ ಮೆಷಿನ್‌ ಜಪ್ತಿ ಮಾಡಲಾಗಿದೆ.

ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಬಾರ್‌ ಗರ್ಲ್‌ಗಳಾಗಿ ಕೆಲಸಕ್ಕಿಟ್ಟು ಅವರಿಗೆ ಅಶ್ಲೀಲ ಉಡುಗೆ ತೊಡಿಸಿ ನೃತ್ಯ ಮಾಡಿಸಲಾಗುತ್ತಿತ್ತು. ಈ ಮೂಲಕ ಗ್ರಾಹಕರಿಂದ ಅಕ್ರಮ ಹಣ ಗಳಿಕೆಯಲ್ಲಿ ಬಾರ್‌ ಮಾಲೀಕರು ತೊಡಗಿದ್ದರು. ಬಾರ್‌ ಮಾಲೀಕರಾದ ದಿನೇಶ್‌ ಶೆಟ್ಟಿ, ಮಹೇಶ್‌ ಮತ್ತು ಕಿರಣ್‌ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೈವ್‌ಬ್ಯಾಂಡ್‌ ಮೇಲೆ ದಾಳಿ: 66 ಯುವತಿಯರ ರಕ್ಷಣೆ

66 girls rescued from illegal bar in Upparpet