ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ ಓಪನ್:  ಡಿಸೆಂಬರ್ ತಿಂಗಳೊಳಗೆ ಸೇವೆ ಆರಂಭ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

All staff,Mandatory,Vaccine,Must get,Minister,Education,Dr.K.Sudhakar,NOTE
Promotion

ಬೆಂಗಳೂರು,ಅಕ್ಟೋಬರ್,6,2022(www.justkannada.in): ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ ಓಪನ್ ಮಾಡುತ್ತೇವೆ.   ಡಿಸೆಂಬರ್ ತಿಂಗಳೊಳಗೆ ನಮ್ಮ ಕ್ಲಿನಿಕ್ ಸೇವೆ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯಾದ್ಯಂತ 438 ನಮ್ಮ ಕ್ಲಿನಿಕ್ ಓಪನ್ ಆಗಲಿವೆ. ಬೆಂಗಳೂರಿನಲ್ಲಿ  243 ನಮ್ಮ ಕ್ಲಿನಿಕ್ ತೆರೆಯಲಿವೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಭಾಗಶಃ ಮುಗಿದಿದೆ. ಇನ್ನೂ ಕೆಲ ವೈದ್ಯರ ನೇಮಕಾತಿ ಆಗಲಿದೆ. ಬೆಂಗಳೂರಿನ ಪ್ರತಿ ವಾರ್ಡ್ ನಲ್ಲೂ ನಮ್ಮ ಕ್ಲಿನಿಕ್ ನಿರ್ಮಾಣವಾಗಲಿದೆ.  ಬಡವರಿಗೆ ಈ ನಮ್ಮ ಕ್ಲಿನಿಕ್ ಅನುಕೂಲವಾಗಲಿದೆ ಎಂದರು.udupi-corona-green-zone-month-minister-dr-k-sudhakar

ಏರ್ ಆ್ಯಂಬುಲೆನ್ಸ್ ಸೇವೆ ಆರಂಭಿಸುವ ಬಗ್ಗೆ ಚರ್ಚಿಸುತ್ತೇವೆ. ಏರ್ ಆಂಬ್ಯುಲೆನ್ ಸೇವೆ ಸಂಬಂಧ ಖಾಸಗಿಯವರ ಜತೆ ಚರ್ಚೆ ನಡೆಸಲಾಗುತ್ತದೆ.  ವರ್ಷಕ್ಕೆ ಇಷ್ಟು ಅಂತಾ ಏರ್ ಆಂಬ್ಯುಲೆನ್ಸ್ ಬಳಸಲು ಚಿಂತನೆ ನಡೆಸಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: 438 – namma clinics –open-Health Minister -Dr. K. Sudhakar.