ಫುಡ್ ಪಾಯಿಸನ್ ನಿಂದ ಮೂರು ಅನಾಥ ಮಕ್ಕಳು ಸಾವು: ಎಂಟು ಮಕ್ಕಳು ಗಂಭೀರ ಅಸ್ವಸ್ಥ.

ತಮಿಳುನಾಡು,ಅಕ್ಟೋಬರ್,6,2022(www.justkannada.in): ಫುಡ್ ಪಾಯಿಸನ್ ನಿಂದ ಮೂರು ಅನಾಥ ಮಕ್ಕಳು ಸಾವನ್ನಪ್ಪಿ ಎಂಟು ಮಕ್ಕಳು ಗಂಭೀರವಾಗಿ ಅಸ್ವಸ್ಥರಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತಿರಪ್ಪೂರ್ ಅನಾಥಾಶ್ರಮದಲ್ಲಿ ಈ ಘಟನೆ ನಡೆದಿದೆ. ಇದೀಗ ಅನಾಥಾಶ್ರಮ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದ್ದು ಈ ಕುರಿತು ತಿರಪ್ಪೊರ್ ಜಿಲ್ಲಾಧಿಕಾರಿ ವಿನೀತ್ ಮಾಹಿತಿ ನೀಡಿದ್ದಾರೆ.

ರಾತ್ರಿ ಆಹಾರ ಸೇವಿಸಿದ ಬಳಿಕ ಕೆಲವರಿಗೆ ವಾಂತಿ ಮತ್ತು ಭೇದಿಯಾಗಿದ್ದು,  ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಆಸ್ಪತ್ರೆಯಲ್ಲಿ ಮೂವರು ಬಾಲಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Key words: Three -orphans -died – food poisoning.