ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿ: ದಾಖಲೆ ಸಮೇತ ಲಿಸ್ಟ್ ಕೊಡ್ತೇನೆಂದ ಪ್ರಮೋದ್ ಮುತಾಲಿಕ್…

Promotion

ಮಂಡ್ಯ,ಸೆಪ್ಟಂಬರ್,12,2020(www.justkannada.in): ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳು ಭಾಗಿಯಾಗಿದ್ದಾರೆ.  ದಾಖಲೆ ಸಮೇತ 32 ಜನರ ಲಿಸ್ಟ್ ಕೊಡುತ್ತೇನೆ ಎಂದು  ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.jk-logo-justkannada-logo

ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್,  ಡ್ರಗ್ಸ್​ ದಂಧೆಯಲ್ಲಿ ಬರೋಬ್ಬರಿ 32 ರಾಜಕಾರಣಿಗಳು ಭಾಗಿಯಾಗಿದ್ದಾರೆ, ಈ ಬಗ್ಗೆ  ಗೃಹಸಚಿವರಿಗೆ ದಾಖಲೆ ಸಹಿತ ಲಿಸ್ಟ್​ ಕೊಡ್ತೀನಿ ಎಂದು ಹೇಳಿದ್ದಾರೆ.

ಡ್ರಗ್ಸ್ ದಂಧೆ ಎಲ್ಲಾ ಕಡೆಗಳಲ್ಲೂ ಇದೆ. ಡ್ರಗ್ಸ್ ದಂಧೆ ಬಗ್ಗೆ ಪೊಲೀಸರಿಗೂ ಗೊತ್ತು. ಆದರೆ ರಾಜಕಾರಣಿಗಳು ಪೊಲೀಸರ ಕೈ ಅನ್ನ ಕಟ್ಟಿಹಾಕಿದ್ದಾರೆ. ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್​ಗಳಿವೆ. ಅವರಿಗೆ ಸಾವಿರಾರು ಕೋಟಿ ರೂ. ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್‌ನಿಂದ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.32-politicians-involved-drug-dealing-srirama-sene-chief-pramod-muthalik

ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಇರುವುದು ಸತ್ಯ. ಡ್ರಗ್ಸ್ ದಂಧೆಯಲ್ಲಿ ಜಮೀರ್  ಪಾತ್ರ ಶೇ.100ರಷ್ಟು ಇದೆ.  ಇದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಅವರ​ನ್ನು ಅರೆಸ್ಟ್ ಮಾಡ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

Key words: 32 politicians- involved – drug dealing-srirama sene –chief-Pramod Muthalik